ಸಿಲಿಕಾನ್ ಸಿಟಿಯಲ್ಲಿ ಸದ್ಯದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್‍ಗಳು ➤ ಏನಿದರ ವಿಶೇಷತೆ….?

(ನ್ಯೂಸ್ ಕಡಬ) newskadaba.com ಬೆಂಳೂರು, ಅ.05: ಬಿಎಂಟಿಸಿಯ ಬಹು ವರ್ಷಗಳ ನಿರೀಕ್ಷಿತ ಯೋಜನೆಗಳಲ್ಲಿ ನಗರಕ್ಕೆ ಎಲೆಕ್ಟ್ರಿಕ್ ಐಷಾರಾಮಿ​ ಬಸ್​ಗಳನ್ನ ಇಳಿಸುವುದೂ ಒಂದಾಗಿದೆ.  ಆ ಯೋಜನೆಯ ಐಷಾರಾಮಿ ಬಸ್ಸುಗಳು ರಸ್ತೆಗೆ ಈಗ ಇಳಿಯುತ್ತೆ, ಆಗ ಇಳಿಯುತ್ತೆ ಅಂತ ಜನ ಕಾಯುತ್ತಲೇ ಇದ್ರು. ಆದ್ರೆ ಇದೀಗ ಆ ಟೈಮ್ ಕೂಡಿ ಬರೋ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಯಾಕಂದ್ರೆ ಇಂದು ಯೋಜನೆಯ ಮೊದಲ ಹೆಜ್ಜೆ ಎಂಬಂತೆ ಐಷಾರಾಮಿ ಎಲೆಕ್ಟ್ರಿಕ್ ಬಸ್ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದೆ.

 

 

ಬೆಂಗಳೂರು ದಿನ ಕಳೆದಂತೆ ಬೆಳೆಯುತ್ತಿದೆ, ಜನ ಸಂಖ್ಯೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ವಾಹನಗಳ ಹೆಚ್ಚಳದಿಂದ ಗಾರ್ಡನ್ ಸಿಟಿಯ ವಾಯು ಮಾಲಿನ್ಯ ಪ್ರಮಾಣ ಕೂಡ ಗಮನೀಯವಾಗಿ ಹೆಚ್ವಾಗುತ್ತಿದೆ. ಇದನ್ನ ತಕ್ಕಮಟ್ಟಿಗಾದ್ರೂ ಕಡಿಮೆ ಮಾಡುವ ಉದ್ದೇಶದಿಂದ ಬಿಎಂಟಿಸಿ ಎಲೆಕ್ಟ್ರಿಕ್​ ಬಸ್ಸುಗಳನ್ನ ರಸ್ತೆಗೆ ಇಳಿಸಲು ಮುಂದಾಗಿದೆ. ಸದ್ಯ ತೆಲಂಗಾಣ ಮೂಲದ olectra ಕಂಪನಿಯ ಒಂದು ಬಸ್ ಬಿಎಂಟಿಸಿ ಡಿಪೋ 7 ರಲ್ಲಿ ಬಂದು ನಿಂತಿದೆ. ಈ ಬಸ್ಸನ್ನ 2 ಗಂಟೆ ಚಾರ್ಚ್ ಮಾಡಿದರೆ 120 ಕಿಮೀ ಸಂಚಾರ ಮಾಡಬಹುದು. ಈ ಎಲ್ಲಾ ಪ್ರಕ್ರಿಯೆಗಳು ಸದ್ಯದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದ್ದರೂ ಸಹ ಕೊರೊನಾ ಸಂಕಷ್ಟ ದೂರವಾದ ನಂತರ ಬಸ್‍ಗಳು ರಸ್ತೆಗಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Also Read  ಸುರತ್ಕಲ್: ತಾನೇ ಬೀಸಿದ ಬಲೆಗೆ ಸಿಲುಕಿ ಮೀನುಗಾರ ಮೃತ್ಯು

 

 

error: Content is protected !!
Scroll to Top