ಇಂಟರ್ನ್ಯಾಶನಲ್ ಪ್ರೀತಿ..!!! ► ನೇಪಾಳ ಯುವಕನೊಂದಿಗೆ ಉಡುಪಿ ಯುವತಿಯ ಮದುವೆ

(ನ್ಯೂಸ್ ಕಡಬ) newskadaba.com ಉಡುಪಿ,ಸೆ.22. ನೇಪಾಳದ ಯುವಕನೊಂದಿಗೆ ಉಡುಪಿಯ ಕೋಟ ಮಣೂರಿನ ಯುವತಿಯ ಮದುವೆಯು ಉಡುಪಿ ಜಿಲ್ಲೆಯ ಕುಂದಾಪುರದ ಕೋಟದಲ್ಲಿ ರಾಜಲಕ್ಷ್ಮೀ ಸಭಾಂಗಣದಲ್ಲಿ ನಡೆದಿದೆ.

ಉಡುಪಿಯ ಕೋಟ ಮಣೂರಿನ ದಲಿತ ಸಮುದಾಯದ ಯುವತಿ ದೀಪಾ ಹಾಗೂ ನೇಪಾಳದ ಉಪೇನ್ ಡೈಮಾರಿ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಇಬ್ಬರು ತಮ್ಮ ಕುಟುಂಬದ ಸಮ್ಮುಖದಲ್ಲೇ ಸತಿಪತಿಗಳಾಗಿದ್ದಾರೆ.

ನೇಪಾಳದಿಂದ ಉಪೇನ್ ಕುಟುಂಬದಿಂದ ಸುಮಾರು 20 ಮಂದಿ ಮದುವೆಗೆ ಬಂದಿದ್ದರು. ಯುವಕನಿಂದ ಬಿಡಿಗಾಸೂ ಪಡೆಯದೆ ಯುವತಿಯೇ ತನ್ನೆಲ್ಲಾ ಮದುವೆ ಖರ್ಚುವೆಚ್ಚವನ್ನು ಹಾಕಿರುವುದು ವಿಶೇಷ.

ಕುಂದಾಪುರದ ರಾಜಲಕ್ಷ್ಮೀ ಸಭಾಂಗಣದಲ್ಲಿ ಸರಳವಾಗಿ ಮದುವೆಯಾದ ಇವರಿಬ್ಬರೂ ಮೀನು ಫ್ಯಾಕ್ಟರಿಯಲ್ಲಿ ದಿನಗೂಲಿ ಮಾಡುತ್ತಿದ್ದು, ಮುಂದೆಯೂ ಇಲ್ಲೇ ದುಡಿಯುವುದಾಗಿ ಹೇಳಿದ್ದಾರೆ. ಸ್ಥಳೀಯರು, ಮೀನು ಫ್ಯಾಕ್ಟರಿಯ ಸಿಬ್ಬಂದಿಗಳು ಬಂದು ನವದಂಪತಿಗಳಿಗೆ ಹಾರೈಸಿದ್ದಾರೆ.

Also Read  SDPI ರಾಷ್ಟ್ರೀಯ ನಾಯಕರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

error: Content is protected !!
Scroll to Top