ಎಡಮಂಗಲ: ರಸ್ತೆ ದುರಸ್ಥಿ ➤ ಗ್ರಾ.ಪಂ. ರಸ್ತೆ ನಾಗರಿಕರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಎಡಮಂಗಲ, ಅ.05: ತೀರ ಹದಗೆಟ್ಟು ಚರಂಡಿ ಅವ್ಯವಸ್ಥೆಯಲ್ಲಿರುವ ಎಡಮಂಗಲ ಗ್ರಾಮದ ನಾಗನಕಜೆ ರಸ್ತೆಯು ಅಲ್ಲಲ್ಲಿ ಕಾಂಕ್ರಿಟ್‌ ಹಾಕಲ್ಪಟ್ಟು ಉಳಿದ ಭಾಗಗಳು ಹೊಂಡಗುಂಡಿಗಳಿಂದ ಕೂಡಿದ್ದು, ದ್ವಿಚಕ್ರ ವಾಹನ ಮತ್ತು ಪಾದಚಾರಿಗಳಿಗೆ ಹಾಗೂ ಇನ್ನೀತರ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗುತ್ತಿತ್ತು.

 

 

ಇದನ್ನು ಮನಗಂಡ ರಸ್ತೆ ಫಲಾನುಭವಿಗಳು ಒಟ್ಟು ಸೇರಿ ಸುಮಾರು 30 ಮನೆಯವರು ಸಹಕರಿಸಿ ಸ್ವತಃ ಹಣ ಖರ್ಚು ಮಾಡಿ ವಾಹನದಲ್ಲಿ ತಂದು ಹೊಂಡಗುಂಡಿಗಳಿಗೆ ಹಾಕಿ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಸೀತಾರಾಮ ಗೌಡ ನೇತೃತ್ವವನ್ನು ವಹಿಸಿದ್ದರು.

Also Read  ಉಳ್ಳಾಲ ಎಸ್ಐ ಗೂ ಆವರಿಸಿದ ಕೊರೋನಾ

 

error: Content is protected !!
Scroll to Top