ಆಂಧ್ರದ ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣ ➤ ಪುತ್ತೂರಿನ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಅ.05: ಇನ್ ಸ್ಟಾಗ್ರಾಮ್‌ ನಲ್ಲಿ ಪರಿಚಯವಾದ ಯುವತಿಗೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೇ, ಮಾದುವೆಯಾಗುವುದಾಗಿ ವಂಚಿಸಿ, ಆಕೆಯ ಭಾವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆಯೊಡ್ಡಿದಲ್ಲದೆ ದಲಿತ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನೊಂದ ಯುವತಿಯೊಬ್ಬರು ಆಂಧ್ರಪ್ರದೇಶದ ಪೊಲೀಸರಿಗೆ ನೀಡಿದ ದೂರಿನಂತೆ ಪುತ್ತೂರಿನ ರಾಜಕೀಯ ಪಕ್ಷದ ಮುಖಂಡರೊಬ್ಬರ ಪುತ್ರನನ್ನು ಬಂಧಿಸಿರುವ ಬಗ್ಗೆ ಶಂಕೆಯಾಗಿದೆ.

ಬಂಧಿತ ಆರೋಪಿಯನ್ನು ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ನಿವಾಸಿ ಅಬ್ದುಲ್‌ ಹಮೀದ್‌ ಸಾಲ್ಮರ ಎಂಬವರ ಪುತ್ರ ಮೊಹಮ್ಮದ್‌ ಫೈಝಲ್‌ (24 ವ.) ಎಂದು ಗುರುತಿಸಲಾಗಿದೆ. ಅ.4 ರಂದು ಆರೋಪಿಯ ಹುಡುಕಾಟದಲ್ಲಿ ಪುತ್ತೂರಿಗೆ ಬಂದಿದ್ದ ಆಂಧ್ರಪ್ರದೇಶ ಪೊಲೀಸರು ರಾತ್ರಿ ವೇಳೆ ಆರೋಪಿ ಮೊಹಮ್ಮದ್‌ ಫೈಝಲ್‌ ಅವರನ್ನು ಮನೆಯಿಂದ ಬಂಧಿಸಿ ಆಂಧ್ರಪ್ರದೇಶದ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

Also Read  ದೆಹಲಿಯ ನೂತನ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಧರ್ಮೇಂದ್ರ ನೇಮಕ

error: Content is protected !!
Scroll to Top