(ನ್ಯೂಸ್ ಕಡಬ) newskadaba.com ಮಂಗಳೂರು, ಅ.05: ಮಂಗಳೂರು – ಹಾಸನ ರೈಲು ಮಾರ್ಗದ ಯಡಕುಮೇರಿ ಹಾಗು ಕಡಗರವಳ್ಳಿ ನಿಲ್ದಾಣ ಮಧ್ಯೆ ಕೈಗೊಂಡಿರುವ ಅತ್ಯಾಧುನಿಕ ವ್ಯವಸ್ಥೆಗಳಿರುವ ಸಿಗ್ನಲ್ ವ್ಯವಸ್ಥೆ ಅಳವಡಿಕೆ ಕಾಮಗಾರಿಯು ಇದೀಗ ಪೂರ್ಣಗೊಂಡಿದೆ. ಸಿಗ್ನಲ್ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ ಶೇ. 35ರಷ್ಟು ವೃದ್ಧಿಯಾಗಿದ್ದು, ಹೆಚ್ಚು ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ.
ಇನ್ನು ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮವು 4.4 ಕೋ.ರೂ. ವೆಚ್ಚವನ್ನು ಭರಿಸಿದೆ. ಕಡಗರವಳ್ಳಿ ಹಾಗು ಯಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್ ಸೌಲಭ್ಯಗಳು ಲಭ್ಯವಾಗಲಿದ್ದು, ರೈಲು ಸಂಚಾರಗಳ ಸಂಖ್ಯೆ ಗಳನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. ಈ ಮಾರ್ಗದಲ್ಲಿ 24 ತಾಸುಗಳಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ 20ಕ್ಕೇರಲಿದೆ ಮತ್ತು ಪ್ರಸ್ತುತ 13 ರೈಲುಗಳು ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.