ಕಲ್ಲು ಜಾರಿ ಬಿದ್ದು ಯುವ ಕಲಾವಿದ ಮೃತ್ಯು



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.04: ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕಲ್ಲು ಜಾರಿ ಬಿದ್ದು ಯುವ ಕಲಾವಿದ ರಾಘವೇಂದ್ರ ಆಚಾರ್ಯ (38 ವ.) ರವರು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ನಾವರ ಎಂಬಲ್ಲಿ ನಡೆದಿದೆ.





 

 

ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಗೋಳಿಕಟ್ಟೆ ನಿವಾಸಿ ರಾಘವೇಂದ್ರ ಆಚಾರ್ಯರವರು ಕಳೆದ ಹಲವು ವರ್ಷಗಳಿಂದ ಕಾವಲಿ ಮಾಡುವ ಕೆಲಸ ಮಾಡುತ್ತಿದ್ದು, ಇಂದು ಕೂಡ ಕೆಲಸದಲ್ಲಿ ನಿರತರಾಗಿದ್ದು ಕಲ್ಲು ಜಾರಿ ತಲೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಉತ್ತಮ ನಾಟಕ ಕಲಾವಿದರಾಗಿ ಗುರುತಿಸಿಕೊಂಡಿದ್ದು, ಇದೀಗ ವೇಣೂರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೃತರು ತಾಯಿ, ಪತ್ನಿ, 2 ಮಕ್ಕಳು ಸಹೋದರ, ಸಹೋದರಿಯನ್ನು ಅಗಲಿದ್ದಾರೆ.






 

 

error: Content is protected !!
Scroll to Top