ಮಂಗಳೂರಿನ ಪೆಟ್ರೋಲ್‌‌ ಬಂಕ್‌ಗಳಲ್ಲಿ ಕಳ್ಳತನ ➤ 6 ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.04: ಬಂಟ್ವಾಳ ಹಾಗೂ ಮಂಗಳೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪೆಟ್ರೋಲ್‌‌ ಬಂಕ್‌‌‌‌‌‌ಗಳಲ್ಲಿ ನಡೆದ ಕಳ್ಳತನ ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕೆ.ಸಿ.ರೋಡ್‌‌‌ ನಿವಾಸಿ ಮೊಹಮ್ಮದ್‌‌ ಸುಹೈಲ್‌‌ ಯಾನೆ ಅಚ್ಚು(19), ಫಳ್ನೀರ್‌‌‌‌ ರಸ್ತೆ ಮಹಾರಾಜ ಹೈಟ್ಸ್‌‌‌ ಅಪಾರ್ಟ್‌ಮೆಂಟ್‌‌‌‌ ನಿಮಾಸಿ ಮಹಮ್ಮದ್‌‌ ಅರ್ಫಾನ್‌ (20), ತಲಪಾಡಿ ಕೆ.ಸಿ ನಗರ ನಿವಾಸಿಗಳಾದ ಆಶೀಕ್‌ ಯಾನೆ ಅಹ್ಮದ್‌‌‌ ಆಶಿಕ್‌‌‌ ಯಾನೆ ಕೊಲ್ಲೇ ಆಶಿಕ್‌‌ (19), ಕೋಟೆಕಾರು ಅಜ್ಜಿನಡ್ಕ ಮೊಹಮ್ಮದ್‌‌‌ ಇರ್ಫಾನ್‌ (20), ಅಡ್ಯಾರು, ಕಣ್ಣೂರು ನಿವಾಸಿ ಮೊಹಮ್ಮದ್‌‌ ರಮೀಜ್‌ (19) ಹಾಗೂ ತಲಪಾಡಿ ಕೆ.ಸಿ ನಗರ ನಿವಾಸಿ ಅಬ್ದುಲ್‌‌‌‌‌ ರಹಿಮಾನ್‌‌‌‌ ಫೈಜಲ್‌‌ (21) ಎಂದು ಗುರುತಿಸಲಾಗಿದೆ.

Also Read  ಶಿಕ್ಷಕಿ ಆತ್ಮಹತ್ಯೆ- ಪತಿಗೆ 9 ವರ್ಷ ಹಾಗೂ ಅತ್ತೆಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ

ಕೃತ್ಯದ ಸಂದರ್ಭ ಆರೋಪಿಗಳು ಬಳಸಿದ್ದ ಹೆಲ್ಮೆಟ್‌‌‌‌‌‌, ನಗದು, ಬೈಕ್‌ ಸೇರಿದಂತೆ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಏಳು ಅಪರಾಧ ಕೃತ್ತಗಳು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕರ ಸಂಘವು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚುತ್ತಿರುವ ಕಳ್ಳತನಗಳಿಂದಾಗಿ ತಮಗೆ ಭದ್ರತೆ ಒದಗಿಸುವಂತೆ ಕೋರಿದ್ದರು.

error: Content is protected !!
Scroll to Top