(ನ್ಯೂಸ್ ಕಡಬ) newskadaba.com ಕರ್ಮಾಯಿ, ಅ.04: 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಎಂಬಲ್ಲಿ ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಸಕಲೇಶಪುರ ಭಾಗಕ್ಕೆ ಮಾರಾಟ ಮಾಡಲು ಪಿಕಪ್ ನಲ್ಲಿ ಸಾಗಿಸುತ್ತಿದ್ದ ವೇಳೆ ಸ್ಥಳೀಯರು ತಡೆ ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದು, ಬಳಿಕ ಕಡಬ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾನುವಾರುಗಳನ್ನುಅಹಿಂಸಾತ್ಮಕವಾಗಿ ಸಾಗಾಟ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯ ವಿರುದ್ಧ FIR ದಾಖಲಾಗಿದ್ದು ನ್ಯಾಯಧೀಶರು ಎಲ್ಲರ ಜಾಮೀನನ್ನು ಕಳೆದ ದಿನ ವಜಾ ಗೊಳಿಸಿದ್ದಾರೆ. 102 ನೆಕ್ಕಿಲಾಡಿ ಗ್ರಾಮದ ಪಂಜೋಡಿ ನಿವಾಸಿ ಗಂಗಾಧರ ಗೌಡ, ಪುರುಷೋತ್ತಮ ಗೌಡ, ಸಕಲೇಶಪುರ ತಾಲೂಕು ಹೆತ್ತೂರು ವಳಲಹಳ್ಳಿ ಸಮೀಪದ ಹೇಮಂತ್ ಕುಮಾರ್ ಸಿ.ಪಿ. ಯಧುಕುಮಾರ್ ಸಿ.ಎ.ಸಿ.ಎಸ್.ಆನಂದ, ಚಾಲಕ ಕೀರ್ತಿ ಅವರನ್ನು ಬಂಧಿಸಿ ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅ.6 ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಹಿನ್ನಲೆಯಲ್ಲಿ ಆರು ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸರಕಾರಿ ಅಭಿಯೋಜಕಿ ಕವಿತಾ ರವರು ವಾದಿಸಿದ್ದರು.