ಕಡಬ: ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಅ.04: ರಾಜ್ಯ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪೆರಾಬೆ ಗ್ರಾಮ ಉರುಂಬಿಯಲ್ಲಿ ಕುಮಾರಧಾರ ನದಿಗೆ ಬಾಗಿನ ಅರ್ಪಿಸಿದ ಬಳಿಕ ಕಡಬದ ಅಂಬೇಡ್ಕರ್‌ ಭವನದಲ್ಲಿ ಜೀವ ವೈವಿದ್ಯ ನಿರ್ವಹಣಾ ಸಭೆ ನಡೆಸಲಿದ್ದಾರೆ ಎಂದು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ನವೀನ್‌ ಭಂಡಾರಿಯವರು ತಿಳಿಸಿದ್ದಾರೆ. ಸಭೆಯು ಪೂರ್ವಹ್ನ ಕಡಬ ಅಂಬೇಡ್ಕರ್‌ ಭವನದಲ್ಲಿ ಇಂದು ನಡೆಯಲಿದೆ.

 

ಈ ಸಭೆಯಲ್ಲಿ ಜೀವ ವೈವಿದ್ಯ ನಿರ್ವಹಣಾ ಸಮಿತಿಯ ಕಡವ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸದಸ್ಯರಾದ ತೇಜಸ್ವಿನಿ ಶೇಖರ ಗೌಡ, ಶುಭದಾ ರೈ, ಮುತ್ತ ಅಜಿಲ, ವಾಸುದೇವ ಇತ್ಯಾಡಿ, ಚಿದಾನಂದ ಅಜಿಲ ಹಾಗೂ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನವೀನ್‌ ಭಂಡಾರಿ ಯವರು ತಿಳಿಸಿದ್ದಾರೆ.

Also Read  ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ

 

 

error: Content is protected !!
Scroll to Top