ಪುತ್ತೂರು : ಎಪಿಎಂಸಿಯಲ್ಲಿ 7.56 ಕೋಟಿ ಕಾಮಗಾರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.03: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪುತ್ತೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನಾ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಅಧ್ಯಕ್ಷತೆಯನ್ನು ಶಾಸಕ ಸಂಜೀವ ಮಠಂದೂರು ರವರು ವಹಿಸಿದ್ದರು. ನವೀಕೃತ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಉದ್ಘಾಟಿಸಿದರು. ಹಾಗೂ 1000 ಮೆಟ್ರಿಕ್‌ ಟನ್‌ ಸಾಮಾರ್ಥ್ಯದ ಗೋದಾಮವನ್ನು ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ ಸೋಮಶೇಖರ್‌ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಅವರು ಸಂಡ್ರಿಶಾಪ್‌ ಕಟ್ಟಡವನ್ನು ಉದ್ಘಾಟಿಸಿದರು. ಸುಳ್ಯ ಶಾಸಕ ಎಸ್. ಅಂಗಾರ ರವರು ನವೀಕೃತ ಹೂತೋಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಪುತ್ತೂರು ಉಪವಿಭಾಗ ಸಹಾಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌, ಕೃಷಿ ಮಾರಾಟ ಇಲಾಖೆಯ ನಿರ್ದೆಶಕ ಕರೀ ಗೌಡ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಹಾಗೂ ಎಪಿಎಂಸಿಯ ನಿರ್ದೇಶಕರು ಉಪಸ್ಥಿತರಿದ್ದರು.

7.56 ಕೋಟಿ ಕಾಮಗಾರಿ ಉದ್ಘಾಟನೆ
ರೂ.1 ಕೋಟಿ ವೆಚ್ಚದ 1000 ಮೆಟ್ರಿಕ್‌ ಟನ್‌ ಗೋದಾಮು, ರೂ.48.50 ಲಕ್ಷದ ಸಿ.ಸಿ ರಸ್ತೆ ಮತ್ತು ಚರಂಡಿ, ರೂ 3.15 ಕೋಟಿ ವೆಚ್ಚದ ಕಡಬ ಉಪಮಾರುಕಟ್ಟೆ ಪ್ರಾಂಗಣದ ವಿವಿಧ ಅಭಿವೃದ್ಧಿ, 60 ಸಿ ಯಲ್ಲಿ 19 ಗ್ರಾಮೀಣ ಅಭಿವೃದ್ಧಿ, ರೂ.11.80 ಲಕ್ಷದ ಸಂಡ್ರಿಶಾಫ್‌ ಕಟ್ಟಡ, ರೂ 2 ಲಕ್ಷದಲ್ಲಿ ಕೊಬಾರು ಬೋಳ್ನಡ್ಕ- ಆರ್ದೇಲು-ಮರುವಂಜಿ ರಸ್ತೆ ಅಭಿವೃದ್ಧಿ, ರೂ.5 ಲಕ್ಷದಲ್ಲಿ ಕೋಡಿಂಬಾಳ-ಮಜ್ಜಾರು -ಕಡವು ರಸ್ತೆ ಅಭಿವೃದ್ಧಿ, ರೂ.2 ಲಕ್ಷದಲ್ಲಿ ನೆಟ್ಟಣಿಗೆ ಮುಡ್ನೂರು ಸಾಂತ್ಯ, ಕೊಖಣಿಗುಂಡಿ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ, ರೂ.2.50 ಲಕ್ಷದಲ್ಲಿ ಕೊಣಾಲು ತಿರ್ಲೆ, ಪಾತೃಮಅಡಿ ಪರಿಶಿಷ್ಟ ಜಾತಿ ಮೀಸಲು ರಸ್ತೆ ಅಭಿವೃದ್ಧಿ, ರೂ.1.50 ಕೋಟಿಯ ಮುಖ್ಯ ಮಅರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ಹಾಗೂ ಇಂಟರ್ ಲಾಕ್‌, ರೂ.50 ಲಕ್ಷದಲ್ಲಿ ಮುಖ್ಯ ಮಾರಿಕಟ್ಟೆ ಪ್ರಾಂಗಣದ ಗೋಡೆಗಳಿಗೆ ಬಣ್ಣ, ಮೆಶ್‌, ರೂ.8.80 ಲಕ್ಷದಲ್ಲಿ ಆಡಳಿತ ಕಚೇರಿ ಮುಂಭಾಗದ ಹೂತೋಟ, ರೂ.6 ಲಕ್ಷದಲ್ಲಿ 400 ಎಂ.ಟಿ ಗೋದಾಮು ಅಭಿವೃದ್ಧಿ, ರೂ.15 ಲಕ್ಷದಲ್ಲಿ ಆಡಳಿತ ಕಚೇರಿ ಅಭಿವೃದ್ಧಿ, ರೂ.25 ಲಕ್ಷದಲ್ಲಿ ಸಂತೆ ಮಾರುಕಟ್ಟೆ ಹಾಗೂ ಅದರ ಸುತ್ತಲಿನ ಅಂಗಡಿ ಮಳಿಗೆಗಳ ಅಭಿವೃದ್ಧಿ, ರೂ.12 ಲಕ್ಷದಲ್ಲಿ 60 ಸಿಯಲ್ಲಿ ಬಜತ್ತೂರು, ಕೊಂಬಾರು,ಬಂಟ್ರ, ನೂಜಿಬಾಳ್ತಿಲ, ಕುಂತೂರು ಮತ್ತು ಆಲಂಕಾರು ಗ್ರಾಮಗಳಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅದರ ಉದ್ಘಾಟನೆಗಳು ನಡೆಯಿತು.

Also Read  ಚರಂಡಿಯಲ್ಲಿ ಹೂತುಹೋದ ಕಂಟೈನರ್ ➤ ಹೆದ್ದಾರಿ ಸಂಚಾರ ಅಸ್ತವ್ಯಸ್ತ

2.18 ಕೋಟಿ ಕಾಮಗಾರಿ ಶಂಕುಸ್ಥಾಪನೆ:
ಮುಖ್ಯ ಪ್ರಾಂಗಣದಲ್ಲಿ ರೂ.50 ಲ್ಷದ ವಿದ್ಯತ್‌ ಕಾಮಾಗಾರಿ, ರೂ.10 ಲಕ್ಷದ ಕಾರ್ಯದರ್ಶಿಯವರ ವಸತಿ ಗೃಹ ಅಭಿವೃದ್ಧಿ, ರೂ.48 ಲಕ್ಷದಲ್ಲಿ ಕೆದಂಬಾಡಿ, ಬಲ್ನಾಡು, ಕೊಯಿಲ, ಬೆಟ್ಟಂಪಾಡಿ, ಕೊಳ್ತಿಗೆ ಕುದ್ಮಾರು, ನೆಲ್ಯಾಡಿ, ಬೆಳ್ಳಿಪಅಡಿ ಮತ್ತು ಸವಣೂರು ಗ್ರಾಮಗಳು, ರೂ.60 ಲಕ್ಷದಲ್ಲಿ ಅರಿಯಡ್ಕ, ನಿಡ್ಪಳ್ಳಿ, ಕುರಿಯ ಸವಣೂರು, ಪುಣ್ಚಪ್ಪಾಡಿ, ಕೌಕ್ರಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಕೊಳ್ತಿಗೆ ಬೆಳ್ಳಿಪ್ಪಾಡಿ, ಸರ್ವೆ ಕೆಯ್ಯೂರು, ಕೆದಂಬಾಡಿ, 102 ನೆಕ್ಕಿಲಾಡಿ, ಐತ್ತೂರು, ಬಲ್ಯ, ಕಡಬ, ಮತ್ತು ಪೆರಾಬೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲು ಸಂಪರ್ಕ ರಸ್ತೆ ಅಭಿವೃದ್ಧಿ, ರೂ.10 ಲಕ್ಷ ವೆಚ್ಚದಲ್ಲಿ ರೈತ ಸಭಾಭವನದ ಅಭಿವೃದ್ಧಿ, ಅದರ ಮುಂಭಾಗದ ಹಾಗೂ ಅತಿಥಿ ಗೃಹದ ಹಿಂಭಾಗ ಇಂಟರ್‌ ಲಾಕ್‌ ಅಳವಡಿಕೆ, ರೂ.2.3 ಲಕ್ಷದ ಬ್ಯಾಂಕ್‌ ಕಟ್ಟಡ, ಅಂಚೆ ಕಚೇರಿ, ಹೊಸ ಕ್ಯಾಂಟೀನ್‌, ಜೀಪ್‌ ಶೆಡ್‌ಗಳ ಅಭಿವೃದ್ಧಿ, ರೂ.1 ಲಕ್ಷದ ಮುಖ್ಯ ರಸ್ತೆಯ ಬಿಳಿಯಿರುವ ಸ್ವಾಗತ ಕಮಾನು ದುರಸ್ಥಿ, ಹಾಗೂ ರೂ.16 ಲಕ್ಷದ ಕಡಬ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಆಡಳಿತ ಕಚೇರಿ, ಶೌಚಾಲಯ ಸುತ್ತ ಇಂಟರ್‌ ಲಾಕ್‌ ಅಳವಡಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಿತು. ಎಪಿಎಂಸಿ ಅಧ್ಯಕ್ಷ ಮೆದು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸವಣುರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್‌ ರೈ ಕೆಡಂಜಿ ನಿರೂಪಿಸಿದರು.

Also Read  ದ.ಕ ಜಿಲ್ಲಾ ಪಂಚಾಯತ್ನ 16ನೇ ಸಾಮಾನ್ಯ ಸಭೆ

 

error: Content is protected !!
Scroll to Top