ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಅ. 5ರಿಂದ ತೆರೆಯಲಿದೆ ಇಸ್ಕಾನ್ ದೇವಾಲಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.03: ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಭಕ್ತರ ದರ್ಶನಕ್ಕೆ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಶ್ರೀಕೃಷ್ಣನ ಭವ್ಯಸಾನಿಧ್ಯ  ಇಸ್ಕಾನ್ ದೇವಸ್ಥಾನವು ಬರೋಬ್ಬರಿ ಆರು ತಿಂಗಳ ಬಳಿಕ ಅಕ್ಟೋಬರ್ 5ರಂದು ಭಕ್ತರ ದರ್ಶನಕ್ಕೆ ಎಂದಿನಂತೆ ತೆರೆಯಲಿದೆ.

 

 

ಪೂಜ ವಿಧಿ ವಿಧಾನಗಳು ಬೆಳಗ್ಗೆ 9:30-ಮಧ್ಯಾಹ್ನ 12:30 ರತನಕ ಸಂಜೆ 4 ರಿಂದ 8ರತನಕ ಭಕ್ತರ ಪ್ರವೇಶಕ್ಕೆ ಅವಕಾಶ ವಿದ್ದು, ವಾರಾಂತ್ಯದಲ್ಲಿ ಬೆಳಗ್ಗೆ 9:30 ರಿಂದ ರಾತ್ರಿ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ದೇವಾಲಯಕ್ಕೆ ಆಗಮಿಸುವವರು ಕೊರೊನಾ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ  ಪಾಲಿಸಿಕೊಂಡು  ಮುನ್ನೆಚ್ಚರಿಕೆ ಕ್ರಮವಾಗಿ 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನಕ್ಕೆ ಭೇಟಿ ನೀಡದಿರಲು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Also Read  ಚಲಿಸುತ್ತಿದ್ದ ಜೀಪ್‌ ಗೆ ಬೆಂಕಿ ಅವಘಡ

 

 

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕುರಿತು ಜನರಿಗೆ ಅರಿವು ಮೂಡಿಸಲು ಮಂದಿರದ ಪ್ರಮುಖ ಸ್ಥಳಗಳಲ್ಲಿ ಗುರುತು / ಚಿಹ್ನೆಗಳ ಅಳವಡಿಕೆ ಮಾಡಲಾಗಿದ್ದು, ದೇವಸ್ಥಾನದ ಆವರಣದಲ್ಲಿ ಪ್ರತಿ ಸಂದರ್ಶಕರಿಗೂ ಕೈ-ಕಾಲುಗಳನ್ನು ತೊಳೆದು, ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತದೆ ಮತ್ತು ಥರ್ಮಲ್ ಪರೀಕ್ಷೆಗಳು ಕೂಡ ನಡೆಯಲಿದೆ. ಇನ್ಮುಂದೆ ದೇವಸ್ಥಾನದ ಕಲ್ಯಾಣ ಮಂಟಪವನ್ನೂ ಕೂಡ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.

 

error: Content is protected !!
Scroll to Top