ಉಡುಪಿ: ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಗೆ ಅಧಿಕಾರಿಗಳಿಂದ ದಾಳಿ

(ನ್ಯೂಸ್ ಕಡಬ) newskadaba.com ಉಡುಪಿ, ಅ.03: ಬಾರ್ಕೂರು ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಶಿಲೆಕಲ್ಲು ಗಣಿಕಾರಿಕೆಯನ್ನು ಬ್ರಹ್ಮಾವರ ತಹಶೀಲ್ದಾರ್, ಜಿಲ್ಲಾ ಗಣಿ ಅಧಿಕಾರಿಗಳು, ಬ್ರಹ್ಮಾವರ ಆರಕ್ಷಕ ಠಾಣೆಯವರು ಕ್ಷಿಪ್ರ ಕಾರ್ಯಾಚರಣೆ ಮಾಡಿ ಸ್ಥಳ ಮಹಜರು ನಡೆಸಿ ಸ್ಥಗಿತಗೊಳಿಸಿರುತ್ತಾರೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ.

 

 

ಸಾರ್ವಜನಿಕ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗೆ 30 ಮೀ ದೂರದಲ್ಲಿ ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಯಿಂದಾಗಿ  ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಆಗುತ್ತಿದ್ದ ಅನಾನುಕೂಲತೆಗಳ ಬಗ್ಗೆ ಹನೇಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬಂಡಿಮಠ ಗ್ರಾಮಸ್ಥರು, ಬ್ರಹ್ಮಾವರ ತಹಶೀಲ್ದಾರ್, ಜಿಲ್ಲಾಧಿಕಾರಿಗಳು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಬಾರಕೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರು ಕಾವಡಿ ಉಲ್ಲಾಸ್ ಶೆಟ್ಟಿ ಯವರಿಗೆ ದೂರು ನೀಡಿದ್ದಾರೆ. ಸಪ್ಟೆಂಬರ್ 28ರಂದು ಜಿಲ್ಲಾ ಗಣಿ ಅಧಿಕಾರಿಗಳು, ಬ್ರಹ್ಮಾವರ ತಹಶೀಲ್ದಾರ್, ಬ್ರಹ್ಮಾವರ ಅರಕ್ಷಕ ಠಾಣೆಯವರು ಕಾರ್ಯಾಚರಣೆ ನಡೆಸಿ ಸ್ಥಳ ಮಹಜರು ನಡೆಸಿ ಶಾಶ್ವತವಾಗಿ ಸ್ಥಗಿತಗೊಳಿಸಿರುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 

 

error: Content is protected !!

Join the Group

Join WhatsApp Group