(ನ್ಯೂಸ್ ಕಡಬ) newskadaba.com ಮಂಗಳೂರು, ಅ.03: ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಇಂದು ಉಳ್ಳಾಲ ಪುರಸಭೆ ಆಯುಕ್ತರಾದ ರಾಯಪ್ಪ ಅವರು ಬೀದಿ ಬದಿ ವ್ಯಾಪಾರಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಿದರು. ಹಾಗೆಯೇ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಕೊರೊನಾ ನಿಯಮ ಪಾಲಿಸದಿದ್ದರೆ 1,000 ರೂ.ಗಳ ದಂಡ ಮತ್ತು ಮತ್ತೆ ಎರಡನೇ ಬಾರಿ ಇದೇ ಅಪರಾಧ ಮಾಡಿದರೆ 2,000 ರೂ.ಗಳ ದಂಡವನ್ನು ವಿಧಿಸಲಾಗುವುದು. ಮೂರನೇ ಬಾರಿಗೆ ಉಲ್ಲಂಘನೆ ಕಂಡುಬಂದಲ್ಲಿ, ಅಂಗಡಿಯ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಉಳ್ಳಾಲ ತೊಕ್ಕೊಟ್ಟು ಸೇರಿದಂತೆ ಹಲವೆಡೆ ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಕೈಗೊಂಡ ಉಳ್ಳಾಲ ಪುರಸಭೆ ಆಯ್ತುರಾಧ ರಾಯಪ್ಪನವರು ದಂಡ ವಸೂಲಿ ಮಾಡಿದ್ದಾರೆ. ಜತೆಗೆ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿದ್ದರಿಗೂ ದಂಢ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇದರ ಜೊತೆಗೆ ಮಾಸ್ಕ್ ಧರಿಸುವುದರ ಮಹತ್ವದ ಅರಿವನ್ನು ಮೂಡಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾದರು.