ಬಿಳಿನೆಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನವಜೀವನೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಅ.02: ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿಳಿನೆಲೆ ವಲಯ ಇದರ ಸಂಯುಕ್ತದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನವಜೀವನೋತ್ಸವ ಕಾರ್ಯಕ್ರಮ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಇಂದು ನಡೆಯಿತು.

 

 

ಕಾರ್ಯಕ್ರಮದ ಮುಖ್ಯ ಅದ್ಯಕ್ಷತೆಯನ್ನು ತಮ್ಮಯ್ಯ ಗೌಡ, ಜನಜಾಗೃತಿ ವೇದಿಕೆ ವಲಯಾದ್ಯಕ್ಷರು ಬಿಳಿನೆಲೆ ವಲಯ, ಕಾರ್ಯಕ್ರಮದ ಉದ್ಘಾಟನೆಯನ್ನು ಸತೀಶ ಎರ್ಕ ಬಿಳಿನೆಲೆ ಒಕ್ಕೂಟಗಳ ವಲಯಾದ್ಯಕ್ಷರು, ಮುಖ್ಯ ಅಥಿತಿಗಳು ಶ್ರೀ ಯುತ, ಮೇದಪ್ಪ ನಾವೂರು ಯೋಜನಾದಿಕಾರಿಗಳು ಶ್ರೀ ಕ್ಷೇ.ಧ.ಗ್ರಾ.ಯೋ. ಕಡಬ ತಾಲೂಕು, ಗೋಪಾಲಕೃಷ್ಣ ಭಟ್ ಸದಸ್ಯರು ಜನಜಾಗೃತಿ ವೇದಿಕೆ ಬಿಳಿನೆಲೆ ವಲಯ, ಬೊಮ್ಮಣ್ಣ ಗೌಡ ಅದ್ಯಕ್ಷರು ನವಜೀವನ ಸಮಿತಿ ಬಿಳಿನೆಲೆ ವಲಯ, ಬಿಳಿನೆಲೆ ವಲಯ ಮೇಲ್ವಿಚಾರಕರಾದ ದರ್ಣಪ್ಪ ಗೌಡ ಸ್ವಾಗತಿಸಿ, ನವಜೀವನ ಸಮಿತಿ ಸದಸ್ಯರಾದ ಶ್ರೀ ನಾಥ್ ನೆಟ್ಟಣ ವಂದಿಸಿದರು. ಬಿಳಿನೆಲೆ ವಲಯದ ಎಲ್ಲಾ ಸೇವಾಪ್ರತಿನಿದಿಗಳು ಉಪಸ್ಥಿತರಿದ್ದರು. ಕೊಂಬಾರು ಸೇವಾಪ್ರತಿನಿದಿ ಪರಮೇಶ್ವರ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ 102ನೇ ನೆಕ್ಕಿಲಾಡಿ ಒಕ್ಕೂಟದ ಅನುಗ್ರಹ ಸಂಘದ ಸದಸ್ಯರಾದ ಐತ್ತಪ್ಪರಿಗೆ ಹಾಗೂ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿಯಾಗಿರುವ ರವೀಚಂದ್ರರಿಗೆ ಜನಮಂಗಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ವೀಲ್ ಚೆಯರ್ ಹಾಗೂ ಸೈಡ್ ವಾಲ್ಕರ್ ನ್ನು ವಿತರಣೆ ಮಾಡಲಾಯಿತು.

Also Read  ಉಪ್ಪಿನಂಗಡಿ: ಬಾಲಕನ ಮೇಲೆ ಬೀದಿನಾಯಿಗಳ ದಾಳಿ ➤ ಅಪಾಯದಿಂದ ಪಾರು

error: Content is protected !!
Scroll to Top