ಕುಕ್ಕೆ ಸುಬ್ರಹ್ಮಣ್ಯ: ನೂತನ “ಬ್ರಹ್ಮ” ರಥಕ್ಕೆ ಇಂದು ಒಂದು ವರುಷದ ಸಂಭ್ರಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.02: ದಕ್ಷಿಣ ಭಾರತ ಪ್ರಸಿದ್ಧ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ನೂತನ ಬ್ರಹ್ಮರಥಕ್ಕೆ ಇಂದು ಒಂದು ವರುಷ ಸಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೂತನ ಬ್ರಹ್ಮ ರಥ ನೀಡಿದ ಉದ್ಯಮಿ ಮುತ್ತಪ್ಪ ರೈ ಹಾಗೂ ಬಿಡದಿ ರಿಯಾಲಿಟಿ ವೆಂಚರ್‌ ಪಾಲುದಾರ ಅಜಿತ್‌ ಶೆಟ್ಟಿ ಅವರ ನೇತೃತ್ವದಲ್ಲಿ 2.5ಕೋಟಿ ಮೌಲ್ಯದ ಬ್ರಹ್ಮರಥವು ಸುಬ್ರಹ್ಮಣ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಉಡುಪಿಯ ಕೋಟೇಶ್ವರದಲ್ಲಿ ನಿರ್ಮಾಣ ಗೊಂಡ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮ ರಥವನ್ನು ರಸ್ತೆ ಮಾರ್ಗದ ಮೂಲಕ ಕ್ಷೇತ್ರಕ್ಕೆ ತರಲಾಗಿದ್ದು, ರಥ ಬರುವ ಹಲವು ಕಡೆಗಳಲ್ಲಿ ಬ್ರಹ್ಮರಥಕ್ಕೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ತಲುಪಿದ ಬ್ರಹ್ಮ ರಥಕ್ಕೆ ಕ್ಷೇತ್ರದ ವತಿಯಿಂದ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿ- ವಿಧಾನಗಳ ಮೂಲಕ ರಥವನ್ನು ದೇವರಿಗೆ ಸಮರ್ಪಿಸಲಾಯಿತು. ಬ್ರಹ್ಮರಥ ಸಂಚರಿಸುವ ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬ್ರಹ್ಮರಥವನ್ನು ಸ್ವಾಗತ ಮಾಡಿದ್ದರು. ಜಾತಿ-ಧರ್ಮದ ಕಟ್ಟುಪಾಡುಗಳನ್ನು ಬಿಟ್ಟು ಸಮಾಜ ರಥವನ್ನು ಅತ್ಯಂತ ಶ್ರದ್ಧ ಭಕ್ತಿಯಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು. ಹಾಗೆಯೇ ಭವ್ಯ ಮೆರವಣಿಗೆಯ ಮೂಲಕ ರಥವನ್ನು ಸ್ವಾಗತಿಸಲಾಯಿತು. ಬ್ರಹ್ಮರಥದ ವಿಶೇಷತೆ ಏನೆಂದರೇ ಸಾಗುವಾನಿ, ಬೋಗಿ ಕಿಲಾರ್‌ ಮರಗಳನ್ನು ರಥ ನಿರ್ಮಾಣದಲ್ಲಿ ಬಳಸಲಾಗಿದೆ. 63 ಅಡಿ ಎತ್ತರ, 6 ಚಕ್ರಗಳಿದ್ದು, 16 ಅಂತಸ್ತು ಹೀಗೆ ಬ್ರಹ್ಮರಥ ಅಂದಾಜು 22 ಟನ್‌ ಭಾರ ಇರಲಿದೆ. ಶಿವ, ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಳಿಗಳು, ಪಾರ್ವತಿ ಕಲ್ಯಾಣ ದಕ್ಷ ಯಜ್ಞ, ಪುತ್ರ ಕಾಮೆಷ್ಟಿ ಯಾಗ ಚತುರ್ವಂಶಿ ವಿಗ್ರಹ, ಆನೆಕಾಲು ಸಿಂಹಗಳು, ನಾಲ್ಕು ದಿಕ್ಕುಗಳಲ್ಲಿ ದ್ವಾಋಪಾಲಕರು ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳು ಬ್ರಹ್ಮ ರಥದಲ್ಲಿ ವಿಶಿಷ್ಟ ಗಮನ ಸೆಳೆಯುತ್ತಿದೆ.

Also Read  ತೆಂಗಿನ ಸಿಪ್ಪೆಯಲ್ಲಿದ್ದ ಹಾವು ಕಚ್ಚಿ ಮಹಿಳೆ ಮೃತ್ಯು..!!

error: Content is protected !!
Scroll to Top