ಸೆ.28ರಿಂದ ಅಕ್ಟೋಬರ್.2ರ ವರೆಗೆ ಬ್ಯಾಂಕ್ ವ್ಯವಹಾರ ಬಂದ್..!!!

(ನ್ಯೂಸ್ ಕಡಬ) newskadaba.com ಕಡಬ,ಸೆ.22, ಬ್ಯಾಂಕ್ ಖಾತೆಯಲ್ಲಿರುವ ಹಣ ಡ್ರಾ ಮಾಡಲು ಅಥವಾ ಡಿಪಾಸಿಟ್ ಮಾಡಲು ನೀವು ನಿರ್ಧರಿಸಿದ್ದರೆ ಅದನ್ನು ಈ ವಾರದಲ್ಲೇ ಮುಗಿಸುವುದು ಉತ್ತಮ ಯಾಕೆಂದರೆ ಮುಂದಿನ ವಾರದಿಂದ ಐದು ದಿನಗಳ ಕಾಲ ಬ್ಯಾಂಕ್ ಓಪನ್ ಇರುವುದಿಲ್ಲ.

ಈ ಭಾರೀ ಗಾಂಧಿ ಜಯಂತಿ, ದಸರಾ ಹಬ್ಬ ಒಂದೇ ಸಾರಿ ಬಂದಿರುವುದರಿಂದ ಮುಂದಿನ ವಾರ ಸಾಲು ಸಾಲು ರಜೆಗಳು ಬಂದಿವೆ. ಬ್ಯಾಂಕ್ ಗಳು 5 ದಿನಗಳ ಕಾಲ ಸ್ಥಗಿತಗೊಳ್ಳಲಿದ್ದು ಕ್ಯಾಶ್ ಬಿಡಿಸಿಕೊಳ್ಳವರಿಗೆ, ಕ್ಯಾಶ್ ಕಟ್ಟೋರಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ಸೆಪ್ಟಂಬರ್ 28 ರಂದು ನಿರ್ಬಂಧಿತ ರಜೆ ಇದ್ದು,  29 ರಂದು ಆಯುಧ ಪೂಜೆ, 30 ರಂದು ವಿಜಯದಶಮಿ, ಅಕ್ಟೋಬರ್ 1 ರಂದು ಭಾನುವಾರ ಹಾಗೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಹೀಗೆ ಸಾಲು ರಜೆ ಬಂದಿರುವುದರಿಂದ ಗ್ರಾಹಕರು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಗ್ರಾಹಕರು ಸೆಪ್ಟಂಬರ್ 28ಕ್ಕಿಂತ ಮುಂಚೆ ಬ್ಯಾಂಕ್ ವ್ಯವಹಾರ ಮಾಡಿ ಮುಗಿಸುವುದು ಉತ್ತಮ.

error: Content is protected !!
Scroll to Top