ಬೈಕ್‌ ಕಳವು ಮಾಡಿ ಮಾರಾಟಕ್ಕೆ ಯತ್ನ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.01: ಮಂಗಳೂರು ಕದ್ರಿ ಪೂರ್ವ ಪೊಲೀಸ್‌ ಠಾಣೆಯ ವ್ಯಾಪ್ತಿ ಮತ್ತು ಮಂಗಳೂರು ನಗರದ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಕದ್ರಿ ಪೂರ್ವ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿ ಅವರಿಂದ ರೂ.96000 /- ಮೌಲ್ಯದ ಸ್ಪೈಂಡರ್‌ ಬೈಕ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಬಂಧಿತ ಚರಣ್‌ ರಾಜ್‌ 20 ವರ್ಷ ಪ್ರಾಯದವನಾಗಿದ್ದು ಪಂಜಿಮೊಗರು ಗ್ರಾಮದವನಾಗಿದ್ದಾನೆ.

 

ಅರೋಪಿ ಚರಣ್‌ ತನ್ನ ಸಹಚರರಾದ ಸುಮಂತ್‌, ವಿಜಯ್‌ ಎಂಬುವವರೊಂದಿಗೆ ಸೇರಿಕೊಂಡು 2018 ಇಸವಿಯಲ್ಲಿ 1 ಬೈಕ್‌ ಮತ್ತು ಬೇರೆ ಬೇರೆ ದಿನಗಳಲ್ಲಿ ರಾತ್ರಿ ವೇಳೆ ದ್ವಿ ಚಕ್ರ ವಾಹನ ಕಳ್ಳತನ ಮಅಡಿಕೊಂಡು ಮಾರಾಟ ಮಅಡಲು ಪ್ರಯತ್ನಿಸುತ್ತಿದ್ದು, ಇವರು ಎ.ಜೆ ಅಸ್ಪತ್ರೆ, ಯೆಯ್ಯಾಡಿ ಕಡೆ ವಿವಿಧ ಕಡೆಯಿಂದ ಸ್ಪೈಂಡರ್‌ ಬೈಕ್‌ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಜಯ್‌ ತಲೆ ಮರೆಸಿಕೊಂಡಿದ್ದು, ಬಂಧಿತ ಆರೋಪಿ ಚರಣ್‌ ರಾಜ್‌ ವಿರುದ್ಧ ಕಾವೂರು, ಪಣಂಬೂರು ಠಾಣೆಯಲ್ಲಿ ಬೈಕ್‌ ಕಳವು ಹಾಗೂ ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮೇಲೆ ಪ್ರಕರಣ ದಾಖಲಾಗಿದೆ.

Also Read  ಕಡಬ :ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಮಿತಿ ಸಭೆ

 

 

ಮಂಗಳೂರು ನಗರದ ಮಾನ್ಯ ಪೊಲೀಸ್‌ ಆಯುಕ್ತರಾದ ಶ್ರೀ ವಿಕಾಸ್‌ ಕುಮಾರ್‌ ವಿಕಾಸ್‌ ಅವರ ಮಾರ್ಗದರ್ಶನದಂತೆ ಶ್ರೀ ಅರುಣಾಂಶಗಿರಿ ಮಾನ್ಯ ಉಪ ಪೊಲೀಸ್‌ ಆಯುಕ್ತರು (ಕಾ.ಸು) ಮತ್ತು ಶ್ರೀ ವಿನಯ್‌ ಗಾಂವಕರ್‌ ಮಾನ್ಯ ಉಪ ಪೊಲೀಸ್‌ ಆಯುಕ್ತರು ಅಪರಾಧ ಹಾಗೂ ಸಂಚಾರರವರ ನಿರ್ದೇಶನದಂತೆ ಹಾಗೂ ಶ್ರೀ ಎಮ್‌ ಜಗದೀಶ್‌ ಸಹಾಯಕ ಪೊಲೀಸ್‌ ಆಯುಕ್ತರು ಮಂಗಳೂರು ಕೇಂದ್ರ ವಿಭಾಗರವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ನಿರೀಕ್ಷಕರಾದ ಸವಿತೃ ತೇಜ ಪಿ.ಡಿ, ಪಿಎಸೈ ಅನಿತಾ ನಿಕ್ಕಂ, ಪಿ.ಎಸ್‌ ಐ ಜ್ಞಾನಶೇಖರ, ಎ.ಎಸೈ ಶಶಿಧರ್‌ ಶೆಟ್ಟಿ ಮತ್ತು ಸಿಬ್ಬಂದಿಗಳಾದ, ಜಯಾನಂದ, ಉಮೇಶ್‌ ಕೊಟ್ಟಾರಿ, ರಾಘವೇಂದ್ರ, ನಾಗರಾಜ್‌ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Also Read  ಇಂದಿನಿಂದ ಬೆಂಗಳೂರಿನಲ್ಲಿ ಕರ್ನಾಟಕ vs ಕೇರಳ ರಣಜಿ ಫೈಟ್

 

 

error: Content is protected !!
Scroll to Top