ಬಂಟ್ವಾಳ : ಗಾಂಜಾ ಹೊಂದಿದ್ದ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.01: ಬಂಟ್ವಾಳ ಗ್ರಾಮಾಂತರ ಪೊಲೀಸರು ಫರಂಗಿಪೇಟೆಯಲ್ಲಿ ಗಾಂಜಾ ಹೊಂದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನಿಂದ 4 ಸಾವಿರ ರೂ. ಮೌಲ್ಯದ 235 ಗ್ರಾಂ. ಗಾಂಜಾ ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಫರಂಗಿಪೇಟೆ ನಿವಾಸಿ ಮೊಹಮ್ಮದ್‌ ಅಜರುದ್ದೀನ್‌ ಎಂದು ಗುರುತಿಸಲಾಗಿದೆ.

ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್‌ ಡಿಸೋಜ ಮತ್ತು ಪೊಲೀಸ್‌ ಸರ್ಕಲ್‌ ಇನ್ಸ್ ಪೆಕ್ಟರ್‌ ಟಿ.ಡಿ ನಾಗರಾಜ್‌ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪಿಎಸೈ ಪ್ರಸನ್ನ, ಪ್ರೊಬೆಷನರಿ ಪಿಎಸೈ ನಸ್ರಿನ್‌ ತಾಜ್‌, ಎಚ್.‌ ಸಿ. ಸುರೇಶ್‌, ರಾಧಾಕೃಷ್ಣ, ಪಿಸಿಗಳಾದ ನಜೀರ್‌, ಪುನೀತ್‌, ಮನೋಜ್‌, ವಿಶಾಲಾಕ್ಷಿ, ತಂಡ ಕಾರ್ಯಚರಣೆ ನಡೆಸಿದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ.

Also Read  ಮಂಗಳೂರು: ನ್ಯಾಯಸಮ್ಮತ ಚುನಾವಣೆ ನಡೆಸಲು ಕೋವಿ    ➤ ಶಸ್ತ್ರಾಸ್ತ್ರ ದಾಸ್ತಾನಿರಿಸಲು ಜಿಲ್ಲಾಧಿಕಾರಿ ಸೂಚನೆ.!                        

error: Content is protected !!
Scroll to Top