ಬೈಕ್ ‌- ಸ್ಕೂಟಿ ಮುಖಾಮುಖಿ ಡಿಕ್ಕಿ ➤ ಸವಾರರು ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಅಯ್ಯನಕಟ್ಟೆ, ಅ.01:  ಕಳಂಜ ಗ್ರಾಮದ ಅಯ್ಯನಕಟ್ಟೆ ಸೇತುವೆಯ ತಿರುವಿನ ಬಳಿ ಮಾರಪ್ಪ ಮೂಲ್ಯ ಎಂಬವರ ಬೈಕ್‌ ಮತ್ತು ಕುಶಾಲಪ್ಪ ಗೌಡ ಎಂಬವರ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು  ನಡೆದಿದೆ.

ಸ್ಕೂಟಿ ಸವಾರರ ಮೊನಕಾಲಿಗೆ ಗಾಯವಾಗಿದ್ದರಿಂದ ಘಟನಾ ಸ್ಥಳದಲ್ಲಿದ್ದ ಎ.ಕೆ ಅಶ್ರಫ್‌ ರವರು ಗಾಯಾಳುವನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿ  ಚಿಕಿತ್ಸೆ ಕೊಡಿಸಿದರು. ಎರಡೂ ವಾಹನಗಳು ಜಖಂಗೊಂಡು ಸವಾರರು ಸಣ್ಣ ಪ್ರಮಾಣದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಸವಾರರಿಬ್ಬರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.

Also Read  ಬಂಟ್ವಾಳ: ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಲಾರಿ..! ➤ ಕೆಲಕಾಲ ಸಂಚಾರ ವ್ಯತ್ಯಯ

error: Content is protected !!
Scroll to Top