ಬೆಳ್ಳಾರೆ: ನಿವೃತ್ತ ಎ.ಎಸ್.ಐ ಮಧು ಟಿ. ಯವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.01: ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಧು ಟಿ. ಯವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವು ಕಳೆದ ದಿನದಂದು ದೇವಿ ಹೈಟ್ಸ್‌ ನ ಅನುಗ್ರಹ ಸಭಾಭವನದಲ್ಲಿ ನಡೆಯಿತು. ಬೆಳ್ಳಾರೆ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್‌ ಉಳುವಾರು ರವರಿಗೆ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಯಾಗಿದ್ದು ಇವರನ್ನು ಅಭಿನಂದಿಸಲಾಯಿತು. ಸುಳ್ಯದ ಸರ್ಕಲ್‌ ಇನ್ಸ್ ಪೆಕ್ಟರ್‌ ನವೀನ್‌ ಚಂದ್ರ ಜೋಗಿಯವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳ್ಳಾರೆ ಪೊಲೀಸ್‌ ಠಾಣಾ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸನ್ಮಾನ ಎ.ಎಸ್.ಐ ಮಧು ಟಿ ಮತ್ತು ಶ್ರೀಮತಿ ಬೇಬಿರೇಖಾ ದಂಪತಿಗಳನ್ನು ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ಹಾಗೂ ಉಂಗುರ ತೊಡಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಳ್ಯ ಎ.ಐ ಹರೀಶ್‌, ಪ್ರೊಭೆಷನರಿ ಎಸ್.ಐ ಸಂದೀಪ್‌, ಕ್ರೈಮ್‌ ಎಸ್.ಐ ರತ್ನಕುಮಾರ್‌ ಉಪಸ್ಥಿತರಿದ್ದರು. ಕಾನ್ಸ್‌ ಟೇಬಲ್‌ ಶ್ರೀಮತಿ ನಂದಿನಿ ಪ್ರಾರ್ಥಿಸಿ, ಬೆಳ್ಳಾರೆ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎ.ಎಸ್.ಐ ಭಾಸ್ಕರ್‌ ಕಾರ್ಯಕ್ರಮ ನಿರೂಪಿಸಿ, ಶ್ರೀಶೈಲ ವಂದಿಸಿದರು ಸಿಬ್ಬಂದಿ ವರ್ಗದವರು ಸಹಕರಿಸಿದರು.

Also Read  ಮಂಗಳೂರು: 'ರಂಗ್‌‌ದ ಬರ್ಸಾ' ಕಾರ್ಯಕ್ರಮಕ್ಕೆ ಅಡ್ಡಿ ಪ್ರಕರಣ ➤ ಆರು ಮಂದಿ ಆರೋಪಿಗಳಿಗೆ ಜಾಮೀನು

error: Content is protected !!
Scroll to Top