ಹೊಸ್ಮಠ ಸೇತುವೆಯಿಂದ ಹಾರಿ ವ್ಯಕ್ತಿಯ ಹುಚ್ಚಾಟ ➤ ನದಿಯಲ್ಲೇ ನಿಂತು ಪೊಲೀಸರ ಕಾಲನ್ನು ಎಳೆದ ಭೂಪ. ಮುಂದೇನಾಯ್ತು ಗೊತ್ತೇ..೧೧???

(ನ್ಯೂಸ್ ಕಡಬ) newskadaba.com ಕಡಬ, ಸೆ.30: ಕಡಬ ತಾಲೂಕಿನ ಹೊಸ್ಮಠ ಸೇತುವೆಯ ಬಳಿ ವ್ಯಕ್ತಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ಮೊದಲು ತಾನೂ ನದಿಗೆ ಹಾರಿ ಈಜಾಡುತ್ತಾ ಕಾಲ ಕಳೆದಿದ್ದಾನೆ. ಆದರೆ, ಇದನ್ನು ಗಮನಿಸಿದ ಸ್ಥಳೀಯರು, ಆತ ನದಿಗೆ ಬಿದ್ದಿದ್ದಾನೆ ಎಂದು ಆತನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಆತ ಮಾಡಿದ್ದೇ ಬೇರೆ.!??

ಆತನ ಸಹಾಯಕ್ಕೆ ಧಾವಿಸಿದ ಸ್ಥಳೀಯರನ್ನು ಆತ ನೀರಿಗೆ ಎಳೆದು ಹಾಕಿ ಹುಚ್ಚಾಟ ಮೆರೆದಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪ್ರಶ್ನಿಸುತ್ತಿದ್ದಾಗಲೇ ಆತ ನದಿಯಲ್ಲೇ ನಿಂತು ಪೊಲೀಸರ ಕಾಲನ್ನು ಎಳೆದಿದ್ದಾನೆ. ಹರಸಾಹಸ ಪಟ್ಟು ಸ್ಥಳೀಯರ ಸಹಾಯದೊಂದಿಗೆ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್‌, ಎ.ಎಸ್.ಐ ಸುರೇಶ್‌, ಸಿಬ್ಬಂದಿಗಳಾದ ಕನಕರಾಜ್ ಹಾಗೂ ಭವಿತ್‌ ಎಂಬವರು ಆತನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Also Read  ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ

error: Content is protected !!
Scroll to Top