(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.30: ಬೆಳ್ಳಾರೆ ಪೊಲೀಸ್ ಠಾಣಾ ನಿವಾಸಿಯಾದ, ಅಪ್ರಾಪ್ತ ವಯಸ್ಸಿನ ಮಗಳು ಅವರ ಮನೆಯ ಸ್ನಾನದ ಕೊಠಡಿಯಲ್ಲಿರುವ ವೇಳೆ ಆರೋಪಿ ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್ ಎಂಬವನು ಸ್ನಾನದ ಕೊಠಡಿಯ ಹಿಂಬದಿಗೆ ಬಂದು ಬಾಲಕಿಯು ಸ್ನಾನಮಾಡುತ್ತಿರುವ ದೃಶ್ಯವನ್ನು ಆತನ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಾಗ ಬಾಲಕಿಯ ತಾಯಿ ಆರೋಪಿಯ ಮೊಬೈಲ್ ನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದು, ಈ ವೇಳೆ ಆರೋಪಿಯು ಮೊಬೈಲ್ ಎಳೆದುಕೊಂಡು ಪರಾರಿಯಾಗಿರುತ್ತಾನೆ.
ಇನ್ನು ಆರೋಪಿಯ ತಂದೆಯ ಬಳಿ ವಿಚಾರ ಹೇಳಿದಕ್ಕೆ ಆರೋಪಿಯಿಂದ ಬಾಲಕಿಯ ತಂದೆಗೆ ಹಲ್ಲೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಲ್ಮಡ್ಕದ ಶ್ಯಾಮ್ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.