ಕಾಸರಗೋಡು: ಕೊಲೆ ಯತ್ನ ಮಾಡಿ ಬಂಧಿಸಿದ್ದ ಆರೋಪಿ ಪರಾರಿ..!!!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.30: ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಪರಾರಿಯಾದ ಆರೋಪಿಯನ್ನು ಉಪ್ಪಳ ಕೈಕಂಬದ ಆದಂ ಖಾನ್ ( 24) ಎಂದು ಪೊಲೀಸರು ತಿಳಿಸಿದ್ದಾರೆ.

ಪಡನ್ನಕ್ಕಾಡ್ ನಲ್ಲಿರುವ ಕೋವಿಡ್ ನಿಗಾ ಕೇಂದ್ರದಿಂದ ತಪ್ಪಿಸಿ, ಕೇಂದ್ರದ ಕಿಟಿಕಿ ಮುರಿದು ಈತ ಪರಾರಿಯಾಗಿದ್ದಾನೆ. ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿದ್ದ ಆದಂ ಖಾನ್ ಹಾಗೂ ಈತನ ಸಹಚರ ನೌಶಾದ್ ನನ್ನು ಕಾಸರಗೋಡು ಡಿವೈಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದ್ದು, ನ್ಯಾಯಾಲಯದ ಪ್ರಕ್ರಿಯೆ ನಡೆದು ಕೋವಿಡ್ ನಿಗಾ ಕೇಂದ್ರದಲ್ಲಿರಿಸಲಾಗಿತ್ತು. ಈ ನಡುವೆ ಕಳೆದ ದಿನ ರಾತ್ರಿ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Also Read  ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡುವ ವಿರುದ್ಧ ರಾಜ್ಯಾದ್ಯಂತ ಹೋರಾಟ

error: Content is protected !!
Scroll to Top