ಮಂಗಳೂರು ಡ್ರಗ್ಸ್‌ ಪ್ರಕರಣ ➤ ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಸಿಬಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.29: ಮುಂಬೈನಿಂದ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾದ ಆರೋಪಿಯನ್ನು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಇದೀಗ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರಿನ ಬಂದರು ಮೂಲದ ನಿವಾಸಿ ಪೆಡ್ಲರ್ ಶಾ ನವಾಜ್ ನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದು, ಆ ದಿನವೇ ಬೆಂಗಳೂರಿನಲ್ಲಿ ಮತ್ತಿಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

 

 

ಮುಂಬೈ, ಗೋವಾದಿಂದ ಡ್ರಗ್ಸ್ ಸ್ಮಗಲ್ ಮಾಡಿ ಮಂಗಳೂರಿನಲ್ಲಿ ಪೂರೈಸುತ್ತಿದ್ದ ಈ ಪೆಡ್ಲರ್ ಗಳು ಎಂಡಿಎಂಎ, ಎಲ್‌ಎಸ್‌ಡಿ, ಸೇರಿದಂತೆ ಇನ್ನಿತರ ಸಿಂಥೆಟಿಕ್ ಡ್ರಗ್ಸ್ ಸ್ಮಗ್ಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಕೆಂಗೇರಿ ನಿವಾಸಿ ಶಾಮ್ ಹಾಗೂ ನೈಜೀರಿಯಾ ಪ್ರಜೆ ಬಂಧಿತ ಡ್ರಗ್ ಪೆಡ್ಲರ್ ಗಳು. ಈ ಪೆಡ್ಲರ್ ಗಳು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ ಗೆ ಮುಂಬೈ, ಗೋವಾದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 8 ಮಂದಿಯನ್ನು ಬಂಧನ ಮಾಡಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ಸರ್ವಜ್ಞ ವಚನಗಳಿಂದ ಸಮಾಜದಲ್ಲಿ ನೈತಿಕತೆ ನಿರ್ಮಾಣ

 

error: Content is protected !!
Scroll to Top