ಸುಳ್ಯದಲ್ಲಿ ಚರಂಡಿಗಿಳಿದ ಕಾರು ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.29: ಸುಳ್ಯದ ಬಸ್‌ ನಿಲ್ದಾಣದ ಬಳಿ ಕಾರೊಂದು ರಸ್ತೆ ಬದಿ ತಿರುಗುತ್ತಿದ್ದ ವೇಳೆ ಕಾರಿನ ಚಕ್ರ ಫುಟ್‌ ಪಾತ್‌ ಸ್ಲ್ಯಾಬ್ ಮೇಲೆ ಹೋದ ಪರಿಣಾಮ ಸ್ಲ್ಯಾಬ್ ಜಾರಿ ಕಾರಿನ ಚಕ್ರ ಚರಂಡಿಗೆ ಇಳಿದಿದೆ.ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

 

ಬಳಿಕ ಸಾರ್ವಜನಿಕರ ಸಹಕಾರದಿಂದ ಕಾರನ್ನು ಮೇಲೆಕ್ಕೆತ್ತಲಾಯಿತು. ಕಾರು ಐವರ್ನಾಡಿನ ಚಂದ್ರ ಲಿಂಗಂ ರವರಾಗಿದ್ದು ಕಾರಲ್ಲಿದ್ದವರಿಗೆ ಯಾವುದೇ ಅಪಾಯ ಆಗಿಲ್ಲ. ಸುಳ್ಯ ನಗರದ ಫುಟ್‌ ಪಾತ್‌ ಸ್ಲ್ಯಾಬ್‌ ಗಳೆಲ್ಲವೂ ಅಲ್ಲಾಡುತ್ತಿದ್ದು ಜನರು ಅದರ ಮೇಲೆ ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆಯೂ ಈ ರೀತಿಯ ಘಟನೆಗಳು ನಡೆದಿದೆ. ಇನ್ನಾದರೂ ರಸ್ತೆ ದುರಸ್ತಿ, ಹಾಗೂ ಫುಟ್ ಪಾತ್ ಸ್ಲ್ಯಾಬ್ ಗಳ ಅಳವಡಿಕೆ ಕುರಿತಾದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Also Read  ➤ ಮಾರ್ಚ್ 1 ರಂದು ಖಗೋಳದಲ್ಲಿ ಶುಕ್ರ ಹಾಗೂ ಗುರು ಗ್ರಹದ ಜೊತೆಗೆ ಚಂದ್ರ ಕಾಣಿಸಲಿದೆ

 

 

error: Content is protected !!
Scroll to Top