ದಿ.ಎಸ್‌ ಅಬ್ದುಲ್‌ ಖಾದರ್‌ ಅವರ ಸ್ಮರಣಾರ್ಥ ➤ ಕಡಬ ಅಂಬೇಡ್ಕರ್‌ ಭವನದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಸೆ.29: ಇತ್ತೀಚೆಗೆ ನಿಧನರಾದ ಕಾಂಗ್ರೇಸ್‌ನ ಹಿರಿಯ ಮುಖಂಡ ದ.ಕ ಜಿಲ್ಲಾ ಮದ್ರಸ ಮೇನೇಜ್ಮೆಂಟ್ ನ ಕಾರ್ಯಾಧ್ಯಕ್ಷ ದಿ. ಎಸ್‌ ಅಬ್ದುಲ್‌ ಖಾದರ್‌ ಅವರ ಸ್ಮರಣಾರ್ಥ , ಕಡಬ ಅಂಬೇಡ್ಕರ್‌ ಭವನದಲ್ಲಿ ಕಳೆದ ದಿನ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.

 

 

ಎಸ್‌ ಕೆ ಎಸ್‌ ಎಸ್‌ ಎಫ್‌ ಕಡಬ ವಲಯದ, ನ್ಯೂ ಫ್ರೆಂಡ್ಸ್‌ ಕ್ಲಬ್‌, ವಿಖಾಯ ಕಡಬ ವಲಯ ಇವುಗಳ ಆಶ್ರಯದಲ್ಲಿ ಮಂಗಳೂರಿನ ಇಂಡಿಯಾನ್‌ ರೆಡ್‌ ಕ್ರಾಸ್‌ ಸೊಸೈಟಿ ಸಹಭಾಗಿತ್ವದಲ್ಲಿ ನಡೆದ ಶಿಬಿರವನ್ನು ಜಿಲ್ಲಾ ಪಂಚಾಯತ್‌ ಸದಸ್ಯ ಪಿ.ಪಿ ವರ್ಗೀಸ್‌ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಡಬ ವಲಯ ಎಸ್‌ ಕೆ ಎಸ್‌ ಎಸ್‌ ಅಧ್ಯಕ್ಷ ಅಶ್ರಫ್‌ ಶೇಡಿಗುಂಡಿ ಅಧ್ಯಕ್ಷತೆ ವಹಿಸಿದ್ದರು.

Also Read  ಬಿರುಕು ಬಿಟ್ಟ ಪಂಪ್‌ವೆಲ್ ಮೇಲ್ಸೇತುವೆ

 

ಕಡಬ ಠಾಣಾ ಎಸ್ಐ, ಸಿ.ಟಿ ಸುರೇಶ್‌, ಕಡಬ ಪಟ್ಟಣ ಪಂಚಾಯತಿ ಮಖ್ಯಾಧಿಕಾರಿ ಅರುಣ್‌, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್‌. ಬಾಲಕೃಷ್ಣ ಕೊಯಿಲ, ತಾ.ಪಂ. ಮಾಜಿ ಸದಸ್ಯ ಫಝಲ್‌ ಕೋಡಿಂಬಾಳ, ಕಡಬ ಸಿ .ಎ ಬ್ಯಾಂಕ್‌ ನಿರ್ದೇಶಕ ಸತೀಶ್‌ ನಾಯಕ್‌ ಮೇಲಿನ ಮನೆ, ಕಡಬ ಬ್ಲಾಕ್‌ ಯುವ ಕಾಂಗ್ರೇಸ್‌ ಅಧ್ಯಕ್ಷ ಅಭಿಲಾಶ್‌ ಕಲ್ಲುಗುಡ್ಡೆ, ಕಡಬ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಾಬು ಮುಗೇರ, ಎಸ್‌ ಕೆ ಎಸ್‌ ಎಫ್‌ ದ.ಕ ಜಿಲ್ಲಾ ವಿಖಾಯ ಅಧ್ಯಕ್ಷ  ಸಯ್ಯದ್‌ ಇಸ್ಮಾಯಿಲ್‌ ತಂಙಳ್‌, ಉಸ್ತುವಾರಿ ತಾಜುದ್ದೀನ್‌ ಅತಿಥಿಗಳಾಗಿ ಭಾಗವಹಿಸಿದ್ದರು.

 

 

error: Content is protected !!
Scroll to Top