ಕೋಡಿಂಬಾಳ: ದಿ.ಹರೀಶ್ ಮಜ್ಜಾರು ಸ್ಮರಣಾರ್ಥ ಸೋಲಾರ್‌ ಬೀದಿ ದೀಪ ಅಳವಡಿಕೆ‌

(ನ್ಯೂಸ್ ಕಡಬ) newskadaba.com ಕೋಡಿಂಬಾಳ, ಸೆ.27: ಕೋಡಿಂಬಾಳ ಗ್ರಾಮದ ಮಜ್ಜಾರು ನಿವಾಸಿ ಹರೀಶ್‌ ರವರು ಅಕಾಲಿಕವಾಗಿ  2018  ಸೆ.27 ರಂದು ವಿಧಿವಶರಾಗಿದ್ದರು. ಇವರ ಸ್ಮರಣಾರ್ಥ ಮಜ್ಜಾರು ಕ್ರಾಸ್‌ ಬಳಿ ಬಂಧು-ಬಳಗದವರು ಹಾಗೂ ಮಿತ್ರರಿಂದ ಕೊಡುಗೆಯಾಗಿ ನೀಡಲಾಗಿದ್ದ ಸೋಲಾರ್‌ ಬೀದಿ ದೀಪವನ್ನು ಇಂದು ಅಳವಡಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್‌ ಗುಂಡಿಮಜಲು ಅವರು, ಹರೀಶ್‌ ಮಜ್ಜಾರು ಅವರು ಸಂಘಟನೆಯಲ್ಲಿ ತೊಡಗಿಸಿಕೊಂಡು ಉತ್ತಮ ನಡೆನುಡಿಗಳಿಂದ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿ ಕುಟುಂಬವರ್ಗ, ಸಮಾಜದಲ್ಲಿ ಆದರ್ಶವಾಗಿ ಬೆಳೆದುಬಂದವರು. ಇವರು ವಿಧಿವಶರಾಗಿದ್ದು ನಮಗೆಲ್ಲ ನೋವಿನ ಸಂಗತಿ, ಅವರ ಸವಿನೆನಪಿಗಾಗಿ ಇಂದು ಸೋಲಾರ್‌ ಬೀದಿ ದೀಪ ಅಳವಡಿಸಲಾಗಿದೆ ಎಂದರು.

Also Read  ಗದ್ದಲದಲ್ಲಿ ನಡೆದ ನೂಜಿಬಾಳ್ತಿಲ ಗ್ರಾಮ ಸಭೆ ► ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ವ್ಯಾಪಕ ಆಕ್ರೋಶ

 

ಈ ಸಂದರ್ಭದಲ್ಲಿ ದಿ.ಹರೀಶ್‌ ಮಜ್ಜಾರು ಅವರ ಅಜ್ಜ ದುಗ್ಗಣ್ಣ ಗೌಡ, ತಂದೆ ಜತ್ತಪ್ಪ ಗೌಡ, ಸಹೋದರಿಯಾದ ಹರ್ಷಿತಾ, ಪೂಜಾಶ್ರೀ, ಪ್ರಮುಖರಾದ ಪುರಂದರ ಅಂಬೆತ್ತಡ್ಕ, ದಿನೇಶ್‌ ಮಾಸ್ತಿ, ಸಚಿನ್‌ ಮಜ್ಜಾರು, ಜಿನ್ನಪ್ಪ ಮಾಸ್ತಿ, ರೋಹಿತ್‌ ಮಾಸ್ತಿ, ವಿಜೀತ್‌ ಮಾಸ್ತಿ, ವಿನೋದ್‌ ಮಾಸ್ತಿ, ಗಿರೀಶ್‌ ದೆಂತಾರು, ಶರತ್‌ ಮಜ್ಜಾರು, ಪುನಿತ್‌ ಮಜ್ಜಾರು, ಪ್ರದೀಶ್‌ ಕೋಡಿಂಬಾಳ, ಗಣೇಶ್‌ ರಾಮನಗರ, ಜೀವನ್‌ ಮಜ್ಜಾರು, ಜಗದೀಶ್‌ ಕಲ್ಲಂತಡ್ಕ, ಸುಪ್ರೀತ್‌ ದೆಂತಾರು, ಗಿರಿಯಪ್ಪ ಮಜ್ಜಾರು, ಜಸ್ವಂತ್‌ ಮಜ್ಜಾರು ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top