ಬಿಜೆಪಿ ಮುಖಂಡ ಮಾಜಿ ಸಿ.ಎಂ. ಎಸ್. ಎಂ ಕೃಷ್ಣ ಸಂಬಂಧಿಗೆ ಐಟಿ ಶಾಕ್ ►ಕಾಫಿ ಡೇ ಒಡೆಯ ಕಛೇರಿಗೆ ಐಟಿ ಧಾಳಿ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.21, ಕಾಫಿ ಡೇ ಒಡೆಯ ಸಿದ್ಧಾರ್ಥ್’ಗೆ ಸೇರಿದ ಹಲವು ಕಚೇರಿಗಳ ಮೇಲೆ ಗುರುವಾರ ಐಟಿ ದಾಳಿ ನಡೆದಿದೆ.

ಸಿದ್ಧಾರ್ಥ್ ಅವರು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ  ಅವರ ಅಳಿಯ.

ಡಿಕೆಶಿ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸಿಕ್ಕ ಮಹತ್ವದ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.


ಈ ಹಿಂದೆ ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿಕ್ ಚಿದಂಬರಂ ಕಚೇರಿ ಮೇಲೂ ದಾಳಿ ನಡೆದ ಸಂದರ್ಭದಲ್ಲಿ ಸಿದ್ದಾರ್ಥ್’ಗೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

Also Read  ಗೋಹತ್ಯೆ, ಗೋಕಳವು ಮಾಡಿದವರ ಆಸ್ತಿ ಮುಟ್ಟುಗೋಲಿಗೆ ಶಾಸಕ ಭರತ್ ಶೆಟ್ಟಿ ಸೂಚನೆ

ಕಳೆದ ಕೆಲದಿನಗಳಿಂದ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಭಾರೀ ಸುದ್ದಿ ಮಾಡಿತ್ತು. ಇದೀಗ ದಾಳಿಯ ಬೆರನ್ನಲ್ಲೇ ಬಿಜೆಪಿ ನಾಯಕನ ಪುತ್ರನ ಮೇಲೂ ಐಟಿ ದಾಳಿ ನಡೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!
Scroll to Top