ಮಂಗಳೂರು: ಸಿಸಿಬಿ ಪೋಲಿಸರಿಂದ ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಇನ್ನಷ್ಟು ಜೋರಾಗಿ ಸದ್ದು ಮಾಡುತ್ತಿದೆ. ನಿನ್ನೆ ನಟಿ ನಿರೂಪಕಿ ಕರಾವಳಿ ಬೆಡಗಿ ಅನುಶ್ರೀ ಅವರಿಂದ ಡ್ರಗ್‌ ಕುರಿತ ಹೇಳಿಕೆ ಪಡೆದ ಬೆನ್ನಲ್ಲೇ ಮಂಗಳೂರು ಸಿಸಿಬಿ ಪೊಲೀಸರು ಇಂದು ಮತ್ತೊಬ್ಬ ಡ್ರಗ್‌ ಪೆಡ್ಲರ್‌ ನನ್ನು ಬಂಧಿಸಿದ್ದಾರೆ.

ಇಂದು ಮುಂಜಾನೆ ಕಾರ್ಯಚರಣೆ ನಡೆಸಿದ ಸಿಸಿಬಿ ಪೊಲೀಸರು ಡ್ರಗ್‌ ಪೂರೈಕೆ ಮಾಡುತ್ತಿದ್ದ ಮಂಗಳೂರು ಹೊರವಲಯದ ಸೂರಿಂಜೆ ನಿವಾಸಿ ಮೊಹಮ್ಮದ್‌ ಶಾಕಿರ್‌ ಎಂಬಾತನನ್ನು ಬಂಧಿಸಿದ್ದಾರೆ. ಮಹಮ್ಮದ್ ಶಾಕೀರ್ ಗೆ ಸಂಬಂಧಿಸಿ ಇನ್ನಷ್ಟು ಜನರ ಅರೆಸ್ಟ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಡ್ರಗ್ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಕಿಶೋರ್ ಶೆಟ್ಟಿ ಮತ್ತು ಆಕಿಲ್ ನೌಶೀನ್ ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಇವರಿಗೆ ಡ್ರಗ್ಸ್ ಲಿಂಕ್ ಗಳನ್ನು ಈ ಮೊಹಮ್ಮದ್ ಶಾಕೀರ್ ಕೊಡಿಸಿದ್ದ ಎನ್ನಲಾಗಿದೆ.

Also Read  ಅಪರಾಧ ಚಟುಚಟಿಕೆಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.➤ ಸಚಿವ ಯು.ಟಿ ಖಾದರ್ ಸ್ಪಷ್ಟ ಸೂಚನೆ

error: Content is protected !!
Scroll to Top