ಅರಂತೋಡು: ಬೃಹತ್‌ ರಕ್ತದಾನ ಶಿಬಿರ ಮತ್ತು ಪ್ಲಾಸ್ಮಾ ದಾನಿಗಳ ಶಿಬಿರ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ.26: ದ.ಕ ಜಿಲ್ಲಾ ಕೆ ಎಸ್‌ ಎಸ್‌ ಎಫ್‌ ವಿಖಾಯ ರಕ್ತದಾನಿ ಬಳಗ, ಸುಳ್ಯ ಕ್ಲಸ್ಟರ್‌, ಅರಂತೋಡು ಶಾಖೆ ಹಾಗೂ ತೆಕ್ಕಿಲ್‌ ಗ್ರಾಮಾಭಿವೃದ್ದಿ ಪ್ರತಿಷ್ಠಾನ ಅರಂತೋಡು, ಪಠೇಲ್‌ ಚಾರಿಟೇಬಲ್‌ ಟ್ರಸ್ಟ್‌, ಮೆಡಿಕಲ್‌ ಮತ್ತು ಲ್ಯಾಬೋರೇಟರಿ ಸುಳ್ಯ, ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿ ಮಂಗಳೂರು, ಕೆ ಎಸ್‌ ಹೆಗ್ಡೆ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್‌ ರಕ್ತದಾನ ಶಿಬಿರ ಮತ್ತು ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರವು ಇಂದು ತೆಕ್ಕಿಲ್‌ ಸಮುದಾಯ ಭವನದ ಅರಂತೋಡಿನಲ್ಲಿ ನಡೆಯಿತು.

ಜಿಲ್ಲಾ ಎಸ್‌ ಕೆ ಎಸ್‌ ಎಸ್‌ ಎಫ್‌ ಜಿಲ್ಲಾ ಅಧ್ಯಕ್ಷ ಬಹು ಸಯ್ಯದ್‌ ಅಮೀರ್‌ ತಂಙಲ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಎಸ್‌ ಕೆ ಎಸ್‌ ಎಸ್‌ ಎಫ್‌ ವಿಖಾಯದ ಜಿಲ್ಲಾ ಮೆನ್‌ ಇಸ್ಮಾಯಿಲ್‌ ತಂಙಲ್‌, ವರ್ತಕ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಅಲ್‌ ಹಾಜ್‌ ಇಸಾಕ್‌ ಬಾಖವಿ, ಕೆ.ಎಸ್‌ ಜಮಾಲುದ್ದಿನ್‌, ಅಶ್ರಫ್‌ ಗುಂಡಿ, ತಾಲೂಕು ಮದ್ರಸ ಮ್ಯಾನೇಜ್ಮೆಂಟ್‌ ಅಧ್ಯಕ್ಷ ತಾಜ್‌ ಮಹಮ್ಮದ್‌, ಜಿ.ಕೆ ಹಮೀದ್‌, ಅಬ್ದುಲ್‌ ಮಜೀದ್‌ ಮತ್ತಿತರರು ಉಪಸ್ಥಿತರಿದ್ದರು.

Also Read  ವಿದ್ಯಾರ್ಥಿಗಳು ದುಷ್ಚಟಗಳ ದಾಸರಾಗಬೇಡಿ ➤ ಕಡ್ಲೂರು ಸತ್ಯನಾರಾಯಣಾಚಾರ್ಯ

 

error: Content is protected !!
Scroll to Top