ಮಂಗಳೂರು : ಒಂಟಿ ಮಹಿಳೆಯ ಹತ್ಯೆ ➤ ಅತ್ಯಾಚಾರವೆಸಗಿರುವ ಶಂಕೆ .!!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.26: ಕೊಣಾಜೆ ಬಳಿಯ ಹೂಹಾಕುವಕಲ್ಲು ಬೆಳ್ಳೇರಿಯಲ್ಲಿ ಒಂಟಿ ಮಹಿಳೆಯನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.  ಹತ್ಯೆಗೀಡಾದ ಮಹಿಳೆಯನ್ನು ಕುಸುಮ(50) ಎಂದು ಗುರುತಿಸಲಾಗಿದೆ ಮತ್ತು ಇವರ ಶವ ಮನೆಯಲ್ಲಿ ಪತ್ತೆಯಾಗಿದೆ.

 

 

ಕುಸುಮ ಅವರು ತನ್ನ ಮನೆಯಲ್ಲಿ ಏಕಾಂಗಿಯಾಗಿರುತ್ತಿದ್ದು, ಅತ್ಯಾಚಾರವೆಸಗಿ ಹತ್ಯೆ ನಡೆಸಿರುವುದಾಗಿ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆಯ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top