(ನ್ಯೂಸ್ ಕಡಬ) newskadaba.com ಚೊಕ್ಕಡಿ, ಸೆ.26: ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬೆಳ್ಳಾರೆ ಪೊಲೀಸರು ಧಾಳಿ ನಡೆಸಿ 14 ಕೋಳಿಗಳನ್ನು ಹಾಗೂ 9 ಮಂದಿಯನ್ನು ವಶಕ್ಕೆ ಪಡೆದ ಘಟನೆ ಕಳೆದ ದಿನ ರಾತ್ರಿ ನಡೆದಿದೆ.
ಕೋಳಿ ಅಂಕ ಹಾಗೂ ಜುಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರಭಾರ ಠಾಣಾಧಿಕಾರಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಮಧು ಟಿ ಹಾಗೂ ಪೊಲೀಸರು ಜುಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿ ನಿರತರಾಗಿದ್ದ ಅಶೋಕ, ಕುಶಾಲಪ್ಪ, ರವೀಂದ್ರ, ಕೃಷ್ಣ ನಾಯ್ಕ, ಹಿಮಕರ, ನವೀನ್ ಕುಮಾರ್, ರಾಧಾಕೃಷ್ಣ, ಐತ್ತಪ್ಪ, ಕುಶಾಲಪ್ಪ ಗೌಡ, ಎಂಬವರನ್ನು ಹಾಗೂ ವಿವಿಧ ಗಾತ್ರದ 14 ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
Also Read ಕಡಬ: ಎ.ಜೆ.ಎಸ್ ಮೊಬೈಲ್ & ಸರ್ವೀಸ್ ಸೆಂಟರ್ ಉದ್ಘಾಟನೆ ➤ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ