(ನ್ಯೂಸ್ ಕಡಬ) newskadaba.com ತುಮಕೂರು, ಸೆ.21, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಬುಧವಾರ ಸಂಜೆ ವೇಳೆಗೆ ಶ್ರೀಗಳಿಗೆ ಜ್ವರ ಹಾಗೂ ಕಫ ಕಾಣಿಸಿಕೊಂಡಿತ್ತು.
ತಕ್ಷಣ ಸಿದ್ದಗಂಗಾ ಡಾಯಾಗ್ನಾಸ್ಟಿಕ್ ನಲ್ಲಿ ರಕ್ತ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಯಿತು. ರಕ್ತ ಪರೀಕ್ಷೆ ವರದಿ ಕೂಡಾ ನಾರ್ಮಲ್ ಆಗಿ ಬಂದಿದ್ದು, ಭಕ್ತಾಧಿಗಳು ಆತಂಕ ಪಡುವ ಅವಶ್ಯವಿಲ್ಲ ಎಂದು ಶ್ರೀಗಳ ತಪಾಸಣೆ ನಡೆಸಿದ ಸ್ಥಳೀಯ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.