ಅಂಚೆ ಕಛೇರಿಯಿಂದ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ➤1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ಓಪನ್.!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.24: ಭಾರತ ಸರಕಾರ ಅಂಚೆ ಕಛೇರಿಯಿಂದ ಬ್ಯಾಂಕಿಂಗ್‌ ಮನೆ ಬಾಗಿಲಿಗೆ ಅಭಿಯಾನ ಎಲ್ಲಾ ಅಂಚೆ ಕಛೇರಿಗಳಲ್ಲೂ ಸೆ.29 ರಂದು ನಡೆಯಲಿದೆ.

 

ಸ್ಥಳೀಯ ಅಂಚೆ ಕಛೇರಿಯ ಅಂಚೆ ವಿತರಕರ ಮೂಲಕ 1 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖಾತೆ ತೆರೆಯುವ ಅಭಿಯಾನ ಇದಾಗಿದ್ದು, ಕಾಗದ ರಹಿತ, ಪಾಸ್ಬುಕ್‌ ರಹಿತ ಪೂರ್ಣ ಡಿಜಿಟಲ್‌ ಖಾತೆ ಹಾಗೂ ಶೂನ್ಯ ಮೊತ್ತದ ಖಾತೆಗೆ ಇದರಲ್ಲಿ ಅವಕಾಶವಿದೆ. ಖಾತೆ ತೆರೆಯುವವರ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಹಿರಿಯ ಅಂಚೆ ಅಧೀಕ್ಷಕರ ಕಛೇರಿಯನ್ನು ಸಂಪರ್ಕಿಸಬಹುದು.

Also Read  ಜು.27ರಿಂದ ಸುಳ್ಯ-ಪಾಣತ್ತೂರು ಅಂತಾರಾಜ್ಯ ಮಾರ್ಗದಲ್ಲಿ ಮತ್ತೊಂದು ಬಸ್ ಸರ್ವೀಸ್ ಆರಂಭ

 

error: Content is protected !!
Scroll to Top