ಮಹಿಳೆಯೋರ್ವರ 4 ಪವನ್‌ ತೂಕದ ಚಿನ್ನದ ಕರಿಮಣಿಸರ ಎಳೆದು ಪರಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.23: ದ್ವಿಚಕ್ರ ವಾಹನವೊಂದರಲ್ಲಿ ಬಂದ ವ್ಯಕ್ತಿಯೋರ್ವ ಬೀಡಿ ಬ್ರಾಂಚ್‌ ನಿಂದ ಮರಳುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಬಳಿಯ ಮರುವಾಳ ಎಂಬಲ್ಲಿ ನಡೆದಿದೆ.

 

 

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಮರುವಾಳ ನಿವಾಸಿ ಮಹಿಳೆ ದೂರು ನೀಡಿದ್ದಾರೆ. ಕಳೆದ ದಿನ ಮದ್ಯಾಹ್ನದ ವೇಳೆ ಬೀಡಿಕೊಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಂಡಡ್ಕ ಭಾಗದಿಂದ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ನನ್ನ ಕುತ್ತಿಗೆಯಿಂದ 4 ಪವನ್‌ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

Also Read  ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ಕಡಬದ ಬ್ಯೂಲಾ ಪಿ.ಟಿ ಅವರಿಗೆ ಬೆಳ್ಳಿ ಪದಕ

 

error: Content is protected !!
Scroll to Top