ಮಡಿಕೇರಿಯಲ್ಲಿ ಏಕಾಏಕಿ ಕುಸಿದು ಬಿದ್ದ ಮನೆ ಗೋಡೆ ➤ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ.23: ಕೆಲವು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಮಳೆಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಸೋಮವಾರಪೇಟೆ ನಗರದ ಕಲ್ಕಂದೂರು ಬಾಣೆಯಲ್ಲಿ ಅಬ್ಬಾಸ್ ಎಂಬುವರ ಮನೆಯ ಗೋಡೆ ಕುಸಿತಗೊಂಡಿದೆ. ಸಿನಿಮೀಯ ರೀತಿಯಲ್ಲಿ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

ಸೋಮಪಾರಪೇಟೆಯ ಕಲ್ಕಂದೂರು ಬಾಣೆಯ ಅಬ್ಬಾಸ್ ಎಂಬುವರ ಮನೆ ಭಾರೀ ಗಾಳಿ ಮಳೆಗೆ ಮುಂಜಾನೆ 3.30ಕ್ಕೆ ಕುಸಿತಗೊಂಡಿದೆ. ಕುಸಿಯುತ್ತಿದ್ದಂತ ಶಬ್ದ ಕೇಳಿದ್ದೇ ತಡ, ಮನೆಯಲ್ಲಿದ್ದಂತ ನಾಲ್ವರು ತಕ್ಷಣವೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೇ ಮನೆ ಕುಸಿತದಿಂದಾಗಿ ಮನೆಯಲ್ಲಿದ್ದಂತ ವಸ್ತುಗಳು ನಾಶಗೊಂಡಿವೆ.

Also Read  “ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಸುಸಂಸ್ಕೃತ ಮತ್ತು ಸುವ್ಯವಸ್ಥೆ ಬೆಳೆಸಿಕೊಳ್ಳಲು ಸಾಧ್ಯ” ➤ ಶ್ರೀ ಗುರುಪ್ರಸಾದ್

 

 

error: Content is protected !!
Scroll to Top