ಮಣಿಪಾಲದಲ್ಲಿ ಗುಡ್ಡ ಕುಸಿತ ➤ ಅಪಾಯದಲ್ಲಿ ಬಹುಮಹಡಿ ಅಂತಸ್ಥಿನ ಕಟ್ಟಡ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.22: ಮಣಿಪಾಲದಲ್ಲಿ ಗುಡ್ಡ ಕುಸಿತದಿಂದಾಗಿ ಬಹು ಅಂತಸ್ತಿನ ಕಟ್ಟಡವೊಂದು ಅಪಾಯಮಟ್ಟಕ್ಕೆ ಸಿಲುಕಿಕೊಂಡಿದೆ. ಸುಮಾರು 8 ಅಂತಸ್ಥಿನ ವಸತಿ ಸಮುಚ್ಚಯದಲ್ಲಿ ಸುಮಾರು 23 ಕುಟುಂಬಗಳು ನೆಲೆಸಿವೆ. ಕಟ್ಟವು ಅಪಾಯದ ಹಿನ್ನಲೆಯಲ್ಲಿ ಇರುವ ಕಾರಣ ಕುಟುಂಬಗಳು ಸ್ಥಳಾಂತರಿಸಬೇಕಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ.

ಕಳೆದ ದಿನ ಬೆಳಗ್ಗಿನಿಂದಲೇ ಭೂ ಕುಸಿತ ಆರಂಭಗೊಂಡಿದ್ದು, ಕುಸಿತದ ಮಟ್ಟ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಅಪಾಯದ ಮುನ್ಸೂಚನೆಯಲ್ಲಿದೆ. ಸ್ಥಳಕ್ಕೆ ಆಗಮಿಸಿದ ನಗರ ಪಾಲಿಕೆ ಆಯುಕ್ತರಾದ ಆನಂದ್‌ ಕಲ್ಲೋಲಿಕರ್‌, ಎಂಜಿನಿಯರ್‌ ಮೋಹನ್‌ ರಾಜ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಥಳಾ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಎಂಜಿನಿಯರ್ ಮೋಹನ್, ಗೋಡೆಯಲ್ಲಿ ಬಿರುಕು ಉಂಟಾದಲ್ಲಿ ಅಪಾಯದ ಮುನ್ಸೂಚನೆಯಾಗಿದ್ದು, 24 ಗಂಟೆ ಮುಂಚಿತವಾಗಿ ಕಟ್ಟಡದಲ್ಲಿರುವವರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇಂದ್ರಾಳಿ ಜಂಕ್ಷನ್ ನಿಂದ ಮಣಿಪಾಲಕ್ಕೆ ಎರಡು ಕಿಲೋ ಮೀಟರ್ ಅಂತರವಿದ್ದು, ಈ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

error: Content is protected !!

Join the Group

Join WhatsApp Group