ಕಾಸರಗೋಡು: ಮಳೆಯ ಅಬ್ಬರಕ್ಕೆ ನೀರು ತುಂಬಿದ ಹೊಂಡಕ್ಕೆ ಬಿದ್ದು ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು , ಸೆ.21: ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮಧೂರು ಚೇನಕ್ಕೋಡುನ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಚೆಂದ್ರಶೇಖರ (37) ಹಾಗೂ ಚೆರ್ವತ್ತೂರು ಮಯ್ಯಚ್ಚಿಯಲ್ಲಿ ಸುಧಾಕರ (50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. 25 ಕ್ಕೂ ಅಧಿಕ ಮನೆಗಳು ಹಾನಿಗೊಂಡಿದ್ದು, 20 ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

 

ಮಂಜೇಶ್ವರ ತಾಲೂಕಿನ ಲ್ಲಿ ಫೆಲಿಕ್ಸ್ ಡಿ ಸೋಜ ಎಂಬವರ ಮನೆ ಮೇಲೆ ಮರ ಬಿದ್ದು, ಹಾನಿಗೊಂಡಿದೆ. ಕೊಡ್ಲಮೊಗರು ಎಂಬಲ್ಲಿ ಅಬ್ದುಲ್ ಅಝೀಜ್ ಹಾಗೂ ಕುಂಬ್ಡಾಜೆ ಉಬ್ರಂಗಳದ ಲಕ್ಷ್ಮಿ ನಾರಾಯಣ ಭಟ್‌‌ರವರ ಮನೆ ಮೇಲೆ ಮರ ಉರುಳಿ ನಾಶ ನಷ್ಟ ಉಂಟಾಗಿದೆ. ವೆಳ್ಳರಿ ಕುಂಡು ಬಳಾಲ್‌ನಲ್ಲಿ 12 ಕುಟುಂಬ, ಕಳ್ಳಾರ್‌ನಲ್ಲಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅಡ್ಕತ್ತಬೈಲ್ ಬೀಚ್ ಪರಿಸರದಲ್ಲಿ ಇಂದು ಬೆಳಿಗ್ಗೆ ಬೀಸಿದ ಸುಂಟರ ಗಾಳಿಗೆ 12 ರಷ್ಟು ಮನೆಗಳು ಭಾಗಶ: ಹಾನಿಗೊಂಡಿದೆ. ಮಧೂರು ಪಟ್ಲದಿಂದ ಮೂರು ಹಾಗೂ ಮೊಗರು ಪರಿಸರದಿಂದ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

Also Read  ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ..!   ➤ರೈಲ್ವೆ ಟೆಕೆಟ್ ಪರೀಕ್ಷಕ ಅಧಿಕಾರಿ ಸೇವೆಯಿಂದ ವಜಾ!!

 

 

error: Content is protected !!
Scroll to Top