ಸುಬ್ರಹ್ಮಣ್ಯ: ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವು -ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.20: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸವಾರಿ ಮಂಟಪದಲ್ಲಿ ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವಾದ ಘಟನೆ ಕಳೆದ ದಿನ ನಡೆದಿದೆ. ಬೆಳ್ತಂಗಡಿಯ ಬಳ್ಳಮಂಜದ ಕುಟುಂಬದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದು ಓಮ್ನಿಯನ್ನು ( KA 21 P 1467) ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ನಿಲ್ಲಿಸಿ ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ. ವಾಪಸ್ಸು ಸುಮಾರು 10.30 ರ ವೇಳೆಗೆ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಕಾರು ಇರಲಿಲ್ಲ. ಎಷ್ಟು ಹುಡುಕಾಡಿದರೂ ಪತ್ತೆಯಾಗದ ಕಾರಣ ಕಳ್ಳರು ಸದ್ರಿ ಕಾರನ್ನು ನಕಲಿ ಕೀಯನ್ನು ಬಳಸಿ ಕಳವು ಮಾಡಿದ್ದಾರೆ. ಈ ಬಗ್ಗೆ ಗಣೇಶ್‌ ಶೆಟ್ಟಿಯವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

Also Read  ಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ನಿಮ್ಮನ್ನು ಸತಾಯಿಸುತ್ತಿದ್ದಾರೆಯೇ? ►ದೂರುಗಳನ್ನುಸ್ವೀಕರಿಸಲು ನಿಮ್ಮೂರಿಗೆ ಬರಲಿದ್ದಾರೆ ಲೋಕಾಯುಕ್ತ ಆಧಿಕಾರಿಗಳು

 

error: Content is protected !!
Scroll to Top