ಮಂಗಳೂರು: 3 ಬೋಟ್‌ ಮುಳುಗಡೆ, ಸುರಕ್ಷಿತವಾಗಿ ದಡ ಸೇರಿದ ಮೀನುಗಾರರು.

(ನ್ಯೂಸ್ ಕಡಬ) newskadaba.com ಮಲ್ಪೆ, ಸೆ.20: ಇತ್ತೀಚೆಗೆ ಕರಾವಳಿಯಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಇದರಿಂದಾಗಿ ಅಲೆಗಳ ಹೊಡೆತಕ್ಕೆ ಮಲ್ಪೆಯಲ್ಲಿ ಮೂರು ಬೋಟ್ ಗಳು ಮುಳುಗಡೆಯಾದ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಬೋಟ್ ಗಳಲ್ಲಿದ್ದ ಮೀನುಗಾರರು ಕಲ್ಲು ಬಂಡೆ ಮೇಲೆ ಆಶ್ರಯ ಪಡೆದು ದಡ ಸೇರಿದ್ದು ಸುರಕ್ಷಿತವಾಗಿದ್ದಾರೆ. ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

 

 

ಕಳೆದ ದಿನ ರಾತ್ರಿಯೇ ಕರಾವಳಿ ರಕ್ಷಣೆ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ಪ್ರಯತ್ನ ನಡೆದಿದ್ದು, ಸಾಧ್ಯವಾಗದ ಹಿನ್ನಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರಿನಿಂದ ಎನ್ ಡಿಆರ್ ಎಫ್ ಪಡೆಯನ್ನು ಕಳುಹಿಸಲು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಸುರಕ್ಷತಾ ಉಪಕರಣಗಳು ಮತ್ತು ಬೋಟ್ ನೊಂದಿಗೆ ಎನ್ ಡಿಆರ್ ಎಫ್ ಪಡೆ ಮಂಗಳೂರಿನಿಂದ ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

error: Content is protected !!

Join the Group

Join WhatsApp Group