ತಾಯಿಯಿಂದಲ್ಲೇ ಮಕ್ಕಳಿಗೆ ವಿಷಪ್ರಾಶನ ➤ ಪುತ್ರಿ ಮೃತ್ಯು, ಗಂಡನ ವಿರುದ್ದ ದೂರು ದಾಖಲು.!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.20: ಸಂಬಂಧಿಕರ ಮನೆಯಲ್ಲಿದ್ದ ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬವರ ಪತ್ನಿ ದಿವ್ಯಶ್ರೀ (29ವ) ಎಂಬ ಮಹಿಳೆಯೊಬ್ಬರು ಜ್ಯೂಸ್‌ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿದ ಬಳಿಕ ತಾನೂ ಸೇವಿಸಿ ಮಂಗಳೂರಿಗೆ ಸಂಬಂಧಿಕರ ಮನೆಗೆ ತೆರಳಿ ಬಳಿಕ ತಾನೂ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಎಂಟು ವರ್ಷದ ಪುತ್ರಿ ಅನ್ವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಿಸದೆ ಕಳೆದ ದಿನ ರಾತ್ರಿ ಮೃತಪಟ್ಟಿದ್ದಾರೆ.  ಇನ್ನು ಹತ್ತು ವರ್ಷದ ಪುತ್ರ ಅಜಯ್ ರವರು ಹಾಗೂ ತಾಯಿ ದಿವ್ಯ ಚೇತರಿಸಿಕೊಂಡಿದ್ದಾರೆ.

ತನ್ನ ಪತಿ ರಘುನಾಥ ಪರಸ್ತ್ರಿಯೊಂದಿಗೆ ವಾಸವಿದ್ದರೆಂದು ಆರೋಪಿಸಿದ್ದಾರೆ. ಅಲ್ಲದೇ ತನ್ನ ಮೇಲೆ ಅನುಮಾನ ಪಟ್ಟು ಮಾನಸಿಕವಾಗಿ, ಕಿರುಕುಳ ನೀಡುತ್ತಿದ್ದರು. ಜೊತೆಗೆ ಮಕ್ಕಳಿಗೆ, ಮನೆಗೆ ಯಾವುದೇ ರೀತಿಯ ಖರ್ಚುಗಳನ್ನು ನೀಡುತ್ತಿರಲಿಲ್ಲ. ತಾನೇ ದುಡಿದು ಮನೆಯನ್ನು ಮಕ್ಕಳ ವಿದ್ಯಾಭ್ಯಾಸವನ್ನು ನಡೆಸಿಕೊಂಡು ಹೋಗುತ್ತಿದ್ದೆ. ಲಾಕ್ ಡೌನ್ ಬಳಿಕ ತನ್ನಿಬ್ಬರ ಮಕ್ಕಳೊಂದಿಗೆ ತನ್ನ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ದಿವ್ಯರವರು  ತಿಳಿಸಿದ್ದಾರೆ.  ಇದರಿಂದಾಗಿ ದಿವ್ಯರವರ ಸಂಬಂಧಿಕರು ಪತಿ ರಘುನಾಥ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  70 ಸಾವಿರ ಹಣಕ್ಕೆ 1 ತಿಂಗಳ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ…!

error: Content is protected !!
Scroll to Top