ಮಂಗಳೂರು: ಡ್ರಗ್ಸ್ ಸಾಗಾಟ ಮಾಡತ್ತಿದ್ದ ಡ್ಯಾನ್ಸರ್‌ ಕಿಶೋರ್‌ ಶೆಟ್ಟಿ ಬಂಧನ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19: ಡ್ರಗ್ಸ್‌ ಸಾಗಿಸುತ್ತಿದ್ದ ಡ್ಯಾನ್ಸರ್‌ ಕಿಶೋರ್‌ ಶೆಟ್ಟಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ಇಂದು (ಶನಿವಾರ) ಬಂಧಿಸಿದ್ದಾರೆ.

 

 

ಕಿಶೋರ್‌ ಶೆಟ್ಟಿ ಖ್ಯಾತ ಡ್ಯಾನ್ಸರ್‌ ಆಗಿದ್ದು, ಇವರು ಹಿಂದಿಯ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದರು, ಅಲ್ಲದೇ ಡ್ಯಾನ್ಸ್‌ ಇಂಡಿಯಾ ಡ್ಯಾನ್ಸ್‌‌‌ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದೀಗ ಇವರು ಡ್ರಗ್ಸ್‌‌‌ ಸಾಗಿಸುತ್ತಿದ್ದರು ಎಂದು ವರದಿಯಾಗಿದೆ. ಮಾದಕವಸ್ತುಗಳ ಮಾರಾಟ ಜಾಲವನ್ನು ತಡೆಗಟ್ಟುವ ಸಲುವಾಗಿ ಪೊಲೀಸರು ಕಠಿಣ ಕ್ರಮಕೈಗೊಂಡಿದ್ದು, ಇವರನ್ನು ಬಂಧಿಸಲಾಗಿದೆ.

Also Read  ಎರಡೂವರೆ ತಿಂಗಳ ಮಗುವನ್ನು ಎತ್ತಿಕೊಂಡೇ ಅಧಿವೇಶನಕ್ಕೆ ಬಂದ ಶಾಸಕಿ 

 

 

error: Content is protected !!
Scroll to Top