3 ಕೆಜಿ ಬೆಳ್ಳಿ ಕದ್ದ ನೇಪಾಳಿಗರು ► ಉಡುಪಿ ಪೊಲೀಸರ ಬಲೆಗೆ..!!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.20, ಚಿನ್ನದಂಗಡಿಯಿಂದ ಆಭರಣಗಳನ್ನು ಕಳವು ಮಾಡಿದ್ದ ನೇಪಾಳಿಗರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಐದು ಜನ ಕಳ್ಳರನ್ನು ನೇಪಾಲ ಮೂಲದವರು ಎಂದು ಗುರುತಿಸಲಾಗಿದೆ.

ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಮತ್ತು ಪ್ರೇಮ್ ಬಹುದ್ದೂರ್ ಸೌದ್ ಬಂಧಿತ ಆರೋಪಿಗಳು. ಬಂಧಿತರಿಂದ 1 ಲಕ್ಷದ 80 ಸಾವಿರ ಮೌಲ್ಯದ 3 ಕೆಜಿ ಬೆಳ್ಳಿಯ ಕಾಲು ಚೈನ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಂದೂರಿನ ಶೀರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಾವು ಕಳ್ಳತನ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.

Also Read  ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

ಆರೋಪಿಗಳು ಗೂರ್ಖಾ ಹಾಗೂ ಫಾಸ್ಟ್ ಫುಡ್ ಕೆಲಸ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಇವರು ಬೇರೆ ಕಡೆಯೂ ಕೃತ್ಯ ಎಸಗಿದ್ದಾರಾ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

error: Content is protected !!
Scroll to Top