ದೇವಾಲಯಕ್ಕೆ ನುಗ್ಗಿ ದರೋಡೆ ➤ ಹುಂಡಿಯ ಹಣ ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.18: ಇಲ್ಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ಮೂವರ ಅರ್ಚಕರ ಕೊಲೆ ಮಾಡಿ ಹತ್ಯೆ ಮಾಡಿ ಹುಂಡಿ ದೋಚಿದ್ದ ಪ್ರಕರಣ ಮಾಸುವ ಮುನ್ನವೇ ಮದ್ದೂರು ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯ ದೇವಾಲಯದಲ್ಲಿ ಕಳೆದ ದಿನ ರಾತ್ರಿ ಕಳ್ಳತನ ನಡೆದಿದೆ.

 

 

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೇವಾಲಯಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿರುವುದು ಜಿಲ್ಲೆಯಲ್ಲಿ ದುಷ್ಕರ್ಮಿಗಳ ತಂಡ ಬೀಡು ಬಿಟ್ಟಿರುವ ಅನುಮಾನ ಮೂಡಿಸಿದೆ. ನಾಲ್ಕೈದು ದುಷ್ಕರ್ಮಿಗಳ ತಂಡ ದೇವಾಲಯದ ಬಾಗಿಲ ಕಬ್ಬಿನ ಸರಳುಗಳನ್ನು ಮುರಿದು ಒಳನುಗ್ಗಿದ್ದಾರೆ. ಈ ಕಳ್ಳರು ಹುಂಡಿಯ ಹಣ, ವಿವಿಧ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಇವರುಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Also Read  ಬಂಟ್ವಾಳ: ಪೂಂಜಾಲಕಟ್ಟೆ ಠಾಣಾಧಿಕಾರಿ ಅಮಾನತಿಗೆ ದ.ಕ ಜಿಲ್ಲಾ ಲೀಗಲ್ ಫೋರಂ ಆಗ್ರಹ

 

 

error: Content is protected !!
Scroll to Top