ಕಾಸರಗೋಡು: ಮಾರುಕಟ್ಟೆಯನ್ನು ಷರತ್ತುಗಳೊಂದಿಗೆ ತೆರೆಯಲು ಜಿಲ್ಲಾಧಿಕಾರಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.17: ಷರತ್ತುಗಳೊಂದಿಗೆ ಕಾಸರಗೋಡು ಮಾರುಕಟ್ಟೆಯನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ. ಬುಧವಾರ ನಡೆದ ಜಿಲ್ಲಾ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.

 

 

ಒಂದು ದಿನ ಬಿಟ್ಟು ಒಂದು ದಿನ ಶೇಕಡಾ 50 ರಷ್ಟು ಮಂದಿಗೆ ಮಾರಾಟಕ್ಕೆ ಅನುಮತಿ ನೀಡಲಾಗುವುದು. ಟೋಕನ್ ಮೂಲಕ ಗ್ರಾಹಕರನ್ನು ನಿಯಂತ್ರಿಸಲಾಗುವುದು . ಮಾರುಕಟ್ಟೆ ಪ್ರವೇಶಕ್ಕೆ ಹಾಗೂ ಹೊರ ಬರಲು ವಿಶೇಷ ದಾರಿಯ ವ್ಯವಸ್ಥೆ ಮಾಡಲಾಗುವುದು. ಒಂದು ಬಾರಿ 50 ಮಂದಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ.

Also Read  ಸುಳ್ಯ: ಮದ್ಯ ಸೇವಿಸಿ ಜೀಪು ಚಲಾಯಿಸಿದ ಚಾಲಕ ➤ ವಾಹನಗಳು ಜಖಂ

 

 

error: Content is protected !!
Scroll to Top