ಶಾಸಕ ಹರೀಶ್‌ ಪೂಂಜ ರವರಿಂದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.15: ಕೊಕ್ಕಡ ಹೋಬಳಿಯ ಕಂದಾಯ ಅದಾಲತ್‌, ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ ಹಾಗೂ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ಕಾರ್ಯಕ್ರಮವು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ನಡೆಯಿತು.

 

 

ಶಾಸಕ ಹರೀಶ್‌ ಪೂಂಜ ಅವರು ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಪಿಂಚಣಿದಾರರ ಮಂಜೂರಾತಿ ಪತ್ರವನ್ನು ವಿತರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ತಹಶಿಲ್ದಾರ್‌ ಮಹೇಶ್‌ ಜೆ, ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್‌, ತಾ. ಪಂ ಸದಸ್ಯ ಲಕ್ಷ್ಮೀ ನಾರಾಯಣ, ಕಂದಾಯ ಇಲಾಖೆಯ ಕೊಕ್ಕಡ ಹೋಬಳಿಗೆ ಸಂಬಂಧಿಸಿದ ಉಪತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Also Read  ಮುಮ್ತಾಝ್ ಅಲಿ ಪ್ರಕರಣ: ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಅರ್ಜಿ ತಿರಸ್ಕರಿಸಿದ ಕೋರ್ಟ್

 

error: Content is protected !!
Scroll to Top