ಹರಿಹರ : ಹೃದಯಾಘಾತದಿಂದ ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹರಿಹರ, ಸೆ.14: ಅಡಿಕೆ ಮಾರಾಟಕ್ಕೆಂದು ಪೇಟೆಗೆ ತೆರಳಿದ ವೇಳೆ ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ವ್ಯಕ್ತಿಯೋರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು(ಸೋಮವಾರ) ವರದಿಯಾಗಿದೆ.

 

 

ಮೃತರು ಮೂಲತಃ ಹರಿಹರ ಪಲ್ಲತ್ತಡ್ಕ ಗ್ರಾಮದ ಕೆರೆಕ್ಕೋಡಿ ನಿವಾಸಿ ಓಬಯ್ಯ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಮರದ ಕೆತ್ತನೆ ಕೆಲಸ ಮಾಡುವರಾಗಿದ್ದು, ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಮೃತರು ತಾಯಿ, ಪತ್ನಿ, ಹಾಗೂ ಓರ್ವ ಪುತ್ರ ಮತ್ತು ಬಂಧುಗಳನ್ನು ಅಗಲಿದ್ದಾರೆ.

Also Read  ಏಷಿಯನ್ ಫಿಶರೀಸ್ ಸೊಸೈಟಿ ಭಾರತೀಯ ಶಾಖೆ ➤ ಕಡಲ ಮೀನುಗಾರಿಕೆ ಸುಧಾರಣೆ ಯೋಜನೆಗೆ ಚಾಲನೆ

 

 

error: Content is protected !!
Scroll to Top