ಮಂಗಳೂರು: ಕೆನರಾ ಹೈಸ್ಕೂಲಿನ ನಿವೃತ್ತ ಶಿಕ್ಷಕ ಜನಾರ್ದನ ಆಚಾರ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13: ಮಂಗಳೂರಿನ ಕೆನರಾ ಹೈ ಸ್ಕೂಲಿನ ನಿವೃತ್ತ ಶಿಕ್ಷಕರು, ಹಿರಿಯರು, ಎಸ್ ಕೆ ಜಿ ಐ ಸೊಸೈಟಿಯ ಅಧ್ಯಕ್ಷರೂ ಆದ ಬೈಕಾಡಿ ಜನಾರ್ದನ ಆಚಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

 

 

ಕಲಾಭಿಮಾನಿ, ಸಾಹಿತ್ಯಾಭಿಮಾನಿಯಾಗಿಯೂ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬೈಕಾಡಿ, ಕೆನರಾ ಉರ್ವ ಹಾಗೂ ಇತರ ವಿದ್ಯಾ ಸಂಸ್ಥೆಗಳಲ್ಲೂ ಮುಖ್ಯೋಪಾಧ್ಯಾಯರಾಗಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಜನಾರ್ದನ ಅವರ ಅಂತಿಮ ದರ್ಶನಕ್ಕಾಗಿ ಮಂಗಳೂರಿನ ನಂದಿಗುಡ್ಡೆ ಸ್ಮಶಾನದಲ್ಲಿ ಇಂದು 12ರಿಂದ 2 ಗಂಟೆ ತನಕ ವ್ಯವಸ್ಥೆ ಮಾಡಲಾಗಿದ್ದು, ಕೊರೊನ ಭೀತಿಯಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ದೂರದಿಂದಲೇ ಅಂತಿಮ ದರ್ಶನ ಪಡೆಯಬೇಕೆಂದು ಬೈಕಾಡಿ ಯವರ ಪುತ್ರ ಭರತ್ ಬೈಕಾಡಿ ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Also Read  ಮೊದಲ ಪೋಸ್ಟಿಂಗ್‌ ನಲ್ಲಿಯೇ ಲಂಚಕ್ಕೆ ಕೈಯೊಡ್ಡಿದ ಮಹಿಳಾ ಅಧಿಕಾರಿ ➤ ರೆಡ್ ಹ್ಯಾಂಡ್ ಆಗಿ ACB ಬಲೆಗೆ

 

 

error: Content is protected !!
Scroll to Top