ಕಡಬ: ಜಲ ಸಂರಕ್ಷಣೆಯ ಸ್ಟಿಕ್ಕರ್‌ ಅಳವಡಿಸಿ ಅರಿವು ಮೂಡಿಸಿದ ಜೇಸಿಐ ಕಡಬ ಕದಂಬ ಘಟಕ

(ನ್ಯೂಸ್ ಕಡಬ) newskadaba.com ಕಡಬ, ಸೆ.13: ಜೇಸಿಐ ಕಡಬ ಕದಂಬ ಘಟಕವು ಜೆಸಿಐ ಸಪ್ತಾಹದ ಅಂಗವಾಗಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ 2 ನೇ ದಿನದ ಕಾರ್ಯಕ್ರಮ ಕಛೇರಿಯಲ್ಲಿ “ನೀರು ಉಳಿಸಿ- ಜೀವ ಉಳಿಸಿ” ಎಂಬ ಸ್ಟಿಕ್ಕರ್‌ ಬಿಡುಗಡೆ ಮಾಡಲಾಯಿತು.

 

ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ನಾಗರಾಜ್‌ ಎನ್.ಕೆ. ರವರು ಸ್ಟಿಕ್ಕರ್ ಬಿಡಿಗಡೆ ಮಾಡಿದರು. ಜೇಸಿ ಅಧ್ಯಕ್ಷ ಮೋಹನ್‌ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ಸುಪ್ತಾಹ ನಿರ್ದೇಶಕ ತಿರುಮಲೇಶ್‌ ಭಟ್‌ ಹೊಸಮಠ, ಕಾರ್ಯದರ್ಶಿ ಜಾಫಿರ್‌ ಮಹಮ್ಮದ್‌, ಪುಷ್ಷರಾಜ್‌, ಜಯರಾಮ ಮೂರಾಜೆ ಉಪಸ್ಥಿತರಿದ್ದರು. ಬಳಿಕ ಕಡಬ ಹೊಟೇಲ್‌ ಗಳಿಗೆ ತೆರಳಿ ಜಲ ಸಂರಕ್ಷಣೆಯ ಸ್ಟಿಕ್ಕರ್‌ ಅಳವಡಿಸಿ ಅರಿವಿ ಮೂಡಿಸಲಾಯಿತು.

Also Read  ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಹೊಸ ಮಾದರಿ ಪ್ರಶ್ನೆಪತ್ರಿಕೆ..! ➤ ರಾಜ್ಯ ಸರ್ಕಾರ

 

error: Content is protected !!
Scroll to Top