ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.13: ಬೆಳ್ಳಾರೆ ಪೇಟೆಯಲ್ಲಿ ರಾತ್ರಿ ಅಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆ.10 ರಂದು ರಾತ್ರಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿರುವ ಮಾಸ್ಟರ್‌ ಪ್ಲಾನ್‌ ಮತ್ತು ಪ್ಲೈವುಡ್‌ ಅಂಗಡಿಗೆ ನುಗ್ಗಿದ ಕಳ್ಳ ರೂ.9500 ನಗದು ಕದ್ದು ಪರಾರಿಯಾಗಿದ್ದ ಈ ಬಗ್ಗೆ ಅಂಗಡಿ ಮಾಲಕರು ಪೊಲೀಸರಿಗೆ‌ ದೂರು ನೀಡಿದ್ದಾರೆ.

 

ದೂರು ದಾಖಲಿಸಿಕೊಂಡ ಪೊಲೀಸರು ಸೆ.11 ರಂದು ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಪಂಜಿಗಾರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಜಗದೀಶ ಪಾಟಾಜೆ ಎಂಬವನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ರೂ.9500 ನ್ನು ವಸೂಲಿ ಮಾಡಿದ್ದು ಸೆ.12 ರಂದು ಆತನನ್ನು ನ್ಯಾಯಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವು ದಾಗಿ ತಿಳಿದು ಬಂದಿದೆ.ಈತ ಗದಗ ಮೂಲದವನು ಎಂದು ತಿಳಿದು ಬಂದಿದೆ.

Also Read  ಕಡಬ: ನಾಕೂರುಗಯ ಪುಳಿಕುಕ್ಕು ಹಿತರಕ್ಷಣಾ ಸಮಿತಿ ಆಶ್ರಯ ➤ ನಾಳೆ (ಜ. 26) ಗಣಪತಿ ಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ & ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ

 

 

 

error: Content is protected !!
Scroll to Top